ತಾಲಿಬಾನ್ ಉಗ್ರರಿಗೆ ಕದ್ದುಮುಚ್ಚಿ ಬೆಂಬಲ ನೀಡುತ್ತಿರುವ ಪಾಕಿಸ್ತಾನ!
ಶುಕ್ರವಾರ, 16 ಮಾರ್ಚ್ 2018 (12:39 IST)
ವಾಷಿಂಗ್ಟನ್ : ಉಗ್ರರ ನಿಗ್ರಹಕ್ಕಾಗಿ ಅಮೆರಿಕ ಪಾಕಿಸ್ತಾನದ ಮೇಲೆ ಒತ್ತಡ ಹೇರಿದ್ದರೂ, ಪಾಕಿಸ್ತಾನ ಅಫ್ಘಾನ್ ಗಡಿಯಲ್ಲಿರುವ ತಾಲಿಬಾನ್ ಉಗ್ರರಿಗೆ ಕದ್ದು ಮುಚ್ಚಿ, ಬೆಂಬಲ, ನೀಡುತ್ತಿದೆ ಎಂದು ಅಮೆರಿಕದ ಸೇನಾ ಮುಖ್ಯಸ್ಥ ಜನರಲ್ ಜೋಸೆಫ್ ಎಲ್ ವೊಟೆಲ್ ಹೇಳಿದ್ದಾರೆ.
ಪ್ರಶ್ನೆಗೆ ಸಶಸ್ತ್ರ ಸೇವಾ ಸಮಿತಿಗಳ ಸೆನೆಟ್ ಸಭೆಯಲ್ಲಿ ‘ಪಾಕಿಸ್ತಾನ ಇವಾಗಲೂ ತಾಲಿಬಾನ್ ಉಗ್ರರಿಗೆ ಬೆಂಬಲ ನೀಡುತ್ತಿದೆಯೇ’ ಎಂದು ವೊಟೆಲ್ ಅವರಿಗೆ ಕೇಳಲಾದ ಪ್ರಶ್ನೆಗೆ ಅವರು ‘ಇದನ್ನು ಇಲ್ಲವೇ ಇಲ್ಲ ಎಂದು ನಾನು ಹೇಳಲಾರೆ. ಪಾಕ್ ಸೇನೆಯ ಜತೆಗೆ ನಾವು ನಿರಂತರ ಸಂಪರ್ಕದಲ್ಲಿ ಇದ್ದೇವೆ; ಅದರ ಹೊರತಾಗಿಯೂ ಅಫ್ಘಾನ್ ಗಡಿಯಲ್ಲಿರುವ ತಾಲಿಬಾನ್ ಉಗ್ರರಿಗೆ ಪಾಕಿಸ್ತಾನ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ನಾನು ಹೇಳಬಯಸುತ್ತೇನೆ' ಎಂದು ವೊಟೆಲ್ ಉತ್ತರಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ