ಈ ದೇಶದಲ್ಲಿ ಜನರು ಮದ್ಯಕ್ಕೂ ಚಿನ್ನ ಹಾಕಿಕೊಂಡು ಕುಡಿಯುತ್ತಾರಂತೆ!

ಶನಿವಾರ, 4 ಮೇ 2019 (06:57 IST)
ಮಯನ್ಮಾರ್ : ಹೆಚ್ಚಾಗಿ ಜನರು ಮದ್ಯವನ್ನು ಸೇವಿಸುವಾಗ ನೀರು ಅಥವಾ ಸೋಡಾ ಹಾಕಿಕೊಂಡು ಕುಡಿಯುತ್ತಾರೆ. ಆದರೆ ಈ ದೇಶದಲ್ಲಿ ಜನರು  ಮದ್ಯಕ್ಕೂ ಬಂಗಾರವನ್ನು ಹಾಕಿಕೊಂಡು ಕುಡಿಯುತ್ತಾರಂತೆ.




ಹೌದು. ಮಯನ್ಮಾರ್ ಸಂಸ್ಕೃತಿಯಲ್ಲಿ ಬಂಗಾರಕ್ಕೆ ವಿಶೇಷ ಸ್ಥಾನವಿದೆ. ಇಲ್ಲಿನ ಜನರು ಶುದ್ಧ ಚಿನ್ನಕ್ಕೆ ಹೆಚ್ಚು ಮಹತ್ವ ನೀಡ್ತಾರಂತೆ. ಚಿನ್ನ ಸೂರ್ಯನ ಸಂಕೇತ. ಸೂರ್ಯ ಬುದ್ಧಿ ಹಾಗೂ ವಿವೇಕದ ಸಂಕೇತ ಎಂದು ಇಲ್ಲಿನ ಜನರ ಭಾವನೆ. ಅಲ್ಲದೇ ಮಯನ್ಮಾರ್ ನಲ್ಲಿ ಏಳು ಬಂಗಾರದ ದೇವಸ್ಥಾನಗಳಿವೆಯಂತೆ. ಇಲ್ಲಿನ ಜನರು ದೇವಸ್ಥಾನದ ಹುಂಡಿಗಳಿಗೂ ಹಣದ ಬದಲು ಚಿನ್ನವನ್ನೇ ಹಾಕುತ್ತಾರಂತೆ.


ಅಷ್ಟೇ ಅಲ್ಲದೇ ಕೆಲವರು ಕುಡಿಯುವ ವಿಸ್ಕಿಗೂ ಕೂಡ ಚಿನ್ನವನ್ನು ಹಾಕಿ ಕುಡಿಯುತ್ತಾರಂತೆ. ಅದಕ್ಕೆ ವೈಟ್ ವಿಸ್ಕಿ ಎಂದು ಕರೆಯುತ್ತಾರೆ. ಹಾಗೇ ವಿಶೇಷ ಸಂದರ್ಭಗಳಲ್ಲಿ ಅಕ್ಕಿ, ತರಕಾರಿಯಲ್ಲೂ ಚಿನ್ನದ ತುಂಡುಗಳನ್ನಿಡುತ್ತಾರೆ. ಚಿನ್ನ ದೇಹ ಸೇರಿದ್ರೆ ಚರ್ಮ ಹೊಳಪು ಪಡೆಯುತ್ತದೆ ಎಂಬುದು ಇಲ್ಲಿನ ಜನರ  ನಂಬಿಕೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ