ಪೆಟ್ರೋಲ್ ಮುಗಿದಿದೆ ಎಂದ ಶ್ರೀಲಂಕಾ!?

ಮಂಗಳವಾರ, 17 ಮೇ 2022 (07:52 IST)
ಕೊಲಂಬೋ : ತೀವ್ರವಾದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ದೇಶದಲ್ಲಿ ಪೆಟ್ರೋಲ್ ಖಾಲಿಯಾಗಿದೆ.

ಅಗತ್ಯ ವಸ್ತುಗಳ ಆಮದಿಗೆ ನಮ್ಮಲ್ಲಿ ಡಾಲರ್ ಕೊರತೆಯಿದೆ ಎಂದು ಲಂಕಾ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಸೋಮವಾರ ತಿಳಿಸಿದ್ದಾರೆ.

ನಮ್ಮಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಸದ್ಯ ಕೇವಲ ಒಂದು ದಿನಕ್ಕೆ ಸಾಕಾಗುವಷ್ಟು ಪೆಟ್ರೋಲ್ ಸ್ಟಾಕ್ ಇದೆ. ಮುಂದಿನ ತಿಂಗಳುಗಳಲ್ಲಿ ದೇಶದ ಆರ್ಥಿಕ ಬಿಕ್ಕಟ್ಟು ಇನ್ನಷ್ಟು ತೀವ್ರಗತಿಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಲಂಕಾ ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ. 

ನಮ್ಮಲ್ಲಿ ಈಗಾಗಲೇ 3 ಸೆಟ್ ಕಚ್ಚಾತೈಲ ಸಾಗಿಸುವ ಹಡಗುಗಳು ಕೊಲಂಬೋ ಬಂದರಿನ ಹೊರಗೆ ಪಾವತಿಗಾಗಿ ಕಾಯುತ್ತಿವೆ. ಆದರೆ ಪಾವತಿಗೆ ನಮ್ಮ ಸರ್ಕಾರದಿಂದ ಡಾಲರ್ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಕ್ರಮಸಿಂಘೆ ದೇಶದ ಆರ್ಥಿಕ ಸಂಕಷ್ಟವನ್ನು ತಿಳಿಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ