ದೇವರ ಅಸ್ತಿತ್ವದ ಬಗ್ಗೆ ಸವಾಲೆಸೆದ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್

ಭಾನುವಾರ, 8 ಜುಲೈ 2018 (12:30 IST)
ಫಿಲಿಪ್ಪೀನ್ಸ್ : ಇತ್ತೀಚೆಗೆ ದೇವರನ್ನು ಮೂರ್ಖ ಎಂದು ಕರೆದು ವಿವಾದ ಸೃಷ್ಟಿಸಿದ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಈಗ ದೇವರ ಅಸ್ತಿತ್ವದ ಬಗ್ಗೆ ಸವಾಲೆಸಿದ್ದಾರೆ.


ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಇತ್ತೀಚೆಗೆ ದೇವರನ್ನು ಮೂರ್ಖ ಎಂದು ಕರೆಯುವ ಮೂಲಕ ತನ್ನ ಬಹುಸಂಖ್ಯಾತ ರೋಮನ್ ಕ್ಯಾಥೊಲಿಕ್ ದೇಶದಲ್ಲಿ ವಿವಾದವನ್ನು ಸೃಷ್ಟಿಸಿದರು. ಇದೀಗ ಮತ್ತೊಮ್ಮೆ ದೇವರ ಬಗ್ಗೆ ಮಾತನಾಡಿ ದೇವರು ಇದ್ದಾರೆ ಎಂಬುದನ್ನು ಯಾರಾದರು ಸಾಬೀತುಪಡಿಸಿದರೆ ತಾನು ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ್ದಾರೆ.


ಈ ಬಗ್ಗೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು,’ ಮೊದಲ ಪಾಪದ ಕಲ್ಪನೆ ಸೇರಿದಂತೆ, ಕ್ರೈಸ್ತ ಧರ್ಮದ ಕೆಲವು ಮೂಲ ತತ್ವಗಳು ಅಮಾಯಕ ಶಿಶುಗಳನ್ನೂ ಬಾಧಿಸುತ್ತವೆ. ಅವುಗಳನ್ನು ಬ್ಯಾಪ್ಟಿಸಮ್ ಮೂಲಕ ಮಾತ್ರ ಹೋಗಲಾಡಿಸಬಹುದಾಗಿದೆ. ಇಲ್ಲಿ ದೇವರ ತರ್ಕ ಎಲ್ಲಿದೆ?’ ಎಂದು ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ