ಪಿಜ್ಜಾ ಮೋಹ: 6 ತಿಂಗಳ ಮಗುವನ್ನು ಜಜ್ಜಿಕೊಂದ ತಂದೆ!

ಮಂಗಳವಾರ, 7 ಡಿಸೆಂಬರ್ 2021 (09:23 IST)
ಕ್ಯಾನ್ಬೆರಾ : ವ್ಯಕ್ತಿಯೊರ್ವ ಪಿಜ್ಜಾವನ್ನು ಮತ್ತು ಅದರೊಂದಿಗೆ ಪಾನೀಯವನ್ನು ಆರ್ಡರ್ ಮಾಡಿದ್ದನು.
ಆದರೆ ಪಿಜ್ಜಾ ವಿತರಕನು ಆರ್ಡರ್ ಮಾಡಿದ್ದನ್ನು ಬಿಟ್ಟು ಬೇರೆ ಪಿಜ್ಜಾವನ್ನು ಆತನಿಗೆ ನೀಡಿದ್ದು, ಅದರಲ್ಲಿ ಪಾನೀಯ ಬಾಟಲಿ ಬಂದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ಹೆಂಡತಿ, ಮಕ್ಕಳಿಗೆ ಹೊಡೆಯುತ್ತಾನೆ. 
ವಿಕ್ಟೋರಿಯಾದಲ್ಲಿ ವಾಸಿಸುವ ಇವಾಂಡರ್ ವಿಲ್ಸನ್ ಪಿಜ್ಜಾ ಆರ್ಡರ್ ಮಾಡಿದ್ದಾನೆ. ಪಾನೀಯ ಬಾಟಲಿ ಇಲ್ಲದಿರುವುದನ್ನು ಕಂಡು ಕೋಪಗೊಂಡಿದ್ದಾನೆ. ಇವಾಂಡರ್ ತನ್ನ ಕೋಪವನ್ನು ಹೆಂಡತಿ ಚೆಲ್ಸಿಯಾ ಸ್ಮಿತ್ ಬಳಿ ತೋರಿಸಿಕೊಂಡಿದ್ದು, ಆಕೆಗೆ ಸರಿಯಾಗಿ ಹೊಡೆದಿದ್ದಾನೆ. ಮಕ್ಕಳ ಮುಂದೆಯೇ ಆಕೆಯನ್ನು ಎಳೆದಾಡಿಕೊಂಡು ಹೊಡೆದಿದ್ದಾನೆ.
6 ತಿಂಗಳ ಮಗನ ತಲೆಯನ್ನು ನೆಲಕ್ಕೆ ಜಜ್ಜಿಕೊಂದ ತಂದೆಗೆ ಆಸ್ಟ್ರೇಲಿಯಾದ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷದ ಏಪ್ರಿಲ್ 11ರಂದು ಪಿಜ್ಜಾ ಆರ್ಡರ್ ಮಾಡಿದ್ದ ತಂದೆ ಕೂಲ್ಡ್ರಿಂಕ್ಸ್ ಬರದೆ ಇರುವ ವಿಚಾರಕ್ಕೆ ಸಿಟ್ಟಿಗೆದ್ದು ಮಗನನ್ನು ಹೊಡೆದು ಕೊಂದಿದ್ದ. ಈ ವಿಚಾರವಾಗಿ ತಾಯಿ ಪೊಲೀಸರಲ್ಲಿ ದೂರು ನೀಡಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ 8.5 ವರ್ಷದ ಜೈಲು ಶಿಕ್ಷೆ ವಿಧಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ