ಕೆಲಸ ಹುಡುಕಿ ನಗರಕ್ಕೆ ಬಂದಿದ್ದ ಯುವಕ ಅನುಮಾನಸ್ಪದ ಸಾವು

Sampriya

ಶನಿವಾರ, 18 ಅಕ್ಟೋಬರ್ 2025 (21:03 IST)
ಬೆಂಗಳೂರು: ಕೆಲಸಕ್ಕೆಂದು ಸಿಲಿಕಾನ್ ಸಿಟಿಗೆ ಬಂದು ಲಾಡ್ಜ್‌ನಲ್ಲಿ ತಂಗಿದ್ದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಯುವಕ ತಕ್ಷಿತ್‌ (20) ಅನುಮಾನಸ್ಪದವಾಗಿ ಸಾವನ್ನಪ್ಪಿದ ಸಂಬಂಧ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂಟು ದಿನಗಳ ಹಿಂದೆ ತಕ್ಷಿತ್‌ ತನ್ನ ಸ್ನೇಹಿತೆಯೊಂದಿಗೆ ನಗರದ ವಿವಿಧೆಡೆ ಕೆಲಸ ಹುಡುಕುತ್ತಿದ್ದರು. 

ಮಡಿವಾಳದ ಗ್ರ್ಯಾಂಡ್ ಚಾಯ್ಸ್ ಹೋಟೆಲ್‌ನಲ್ಲಿ ತಂಗಿದ್ದರು. ಎರಡು ದಿನಗಳ ಹಿಂದೆ ಯುವತಿ ತಮ್ಮೂರಿಗೆ ವಾಪಸ್ ತೆರಳಿದ್ದರು. ಹೀಗಾಗಿ, ತಕ್ಷಿತ್‌ ಒಬ್ಬರೇ ಕೊಠಡಿಯಲ್ಲಿದ್ದರು. ಕೊಠಡಿಗೆ ಊಟ, ತಿಂಡಿ ತರಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.


ಕೊಠಡಿಯಿಂದ ಯಾರೂ ಹೊರಗೆ ಬಾರದ ಕಾರಣಕ್ಕೆ ಅನುಮಾನಗೊಂಡ ಹೋಟೆಲ್‌ ಸಿಬ್ಬಂದಿ ಶುಕ್ರವಾರ ಸಂಜೆ ಕೊಠಡಿಯ ಬಾಗಿಲು ಒಡೆದು ಪರಿಶೀಲಿಸಿದಾಗ ಯುವಕ ಮೃತಪಟ್ಟಿರುವುದು ಪತ್ತೆಯಾಗಿತ್ತು. 

ಮೃತ ಯುವಕ ಅನಾರೋಗ್ಯದಿಂದ ಬಳಲುತ್ತಿದ್ದು, ಅತಿ ಹೆಚ್ಚು ಸಿಗರೇಟು ಸೇದುತ್ತಿದ್ದರು. ಇನ್ನೂ ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ನಿಖರ ಕಾರಣ ಹೊರಬೀಳಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ