ಕಜಕ್ ನಲ್ಲಿ ಆಕಸ್ಮಿಕವಾಗಿ ಪಾಕ್ ಪ್ರಧಾನಿಯನ್ನು ಭೇಟಿಯಾದ ಪ್ರಧಾನಿ ಮೋದಿ

ಶುಕ್ರವಾರ, 9 ಜೂನ್ 2017 (09:52 IST)
ಆಸ್ತಾನಾ: ಇಂದಿನಿಂದ ಆರಂಭವಾಗುವ ಶಾಂಘೈ ಸಹಕಾರ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಕಜಕಿಸ್ತಾನಕ್ಕೆ ತೆರಳಿರುವ ಪ್ರಧಾನಿ ಮೋದಿ ಅಕಸ್ಮತ್ತಾಗಿ ಪಾಕ್ ಪ್ರಧಾನಿ ನವಾಜ್ ಷರೀಫ್ ರನ್ನು ಬೇಟಿಯಾಗಿದ್ದಾರೆ.

 
ಆದರೆ ಉಭಯ ನಾಯಕರೂ ಪರಸ್ಪರ ಹಸ್ತಾಲಾಘವ ಕೋರಿ ಕ್ಷೇಮ ಸಮಾಚಾರ ವಿಚಾರಿಸಿದರೇ ಹೊರತು, ದೇಶದ ಗಡಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಯಾವುದೇ ಮಾತನಾಡಲಿಲ್ಲ.

ಷರೀಫ್ ಗೆ ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಯಾಗಿತ್ತು. ಹೀಗಾಗಿ ಷರೀಫ್ ಬಳಿ ಪ್ರಧಾನಿ ಮೋದಿ ಆರೋಗ್ಯ ಸ್ಥಿತಿ ಗತಿ ವಿಚಾರಿಸಿದರು. ಹಾಗೂ ಪ್ರಧಾನಿ ಮೋದಿಯನ್ನು ಇಷ್ಟಪಡುವ ಷರೀಫ್ ತಾಯಿಯ ಬಗ್ಗೆಯೂ ವಿಚಾರಿಸಿಕೊಂಡರು ಎನ್ನಲಾಗಿದೆ. ಅದರ ಹೊರತಾಗಿ ಪಾಕ್ ಜತೆ ಯಾವುದೇ ಮಾತುಕತೆ ಇಲ್ಲ ಎಂದು ಭಾರತ ಈ ಮೊದಲೇ ನಿರ್ಧರಿಸಿತ್ತು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ