ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್‌ಮ್ಯಾನ್ ಭದ್ರತೆ

Sampriya

ಸೋಮವಾರ, 28 ಜುಲೈ 2025 (20:01 IST)
Photo Credit X
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂದ ಇಂದು ಎಸ್‌ಐಟಿ ತಂಡ ದೂರುದಾರನೊಂದಿಗೆ ಸ್ಥಳ ಮಹಜರು ನಡೆಸಿದರು. ಬಿಗಿ ಭದ್ರತೆಯೊಂದಿಗೆ ದೂರುದಾರನನ್ನು ನೇತ್ರಾವತಿ ನದಿ ತಟಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು. 

ಈ ವೇಳೆ 15 ಮೃತದೇಹಗಳನ್ನು ಹೂತು ಹಾಕಿದ ಜಾಗಗಳನ್ನು ದೂರುದಾರ ತೋರಿಸಿದ್ದಾರೆ ರಂದು ತಿಳಿದುಬಂದಿದೆ. 

ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನ ಘಟ್ಟದ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ 15 ಮೃತದೇಹ ಹೂತು ಹಾಕಿರುವ ಜಾಗವನ್ನು ಗುರುತಿಸಿದ್ದು. 


ನಾಳೆ ಕೂಡ ಎಸ್.ಐ.ಟಿ ಅಧಿಕಾರಿಗಳ ಸಮ್ಮುಖದಲ್ಲಿ ಮತ್ತೆ ಸ್ಥಳ ಮಹಜರು ಕಾರ್ಯ ಮುಂದುವರೆಯಲಿದೆ. ಗುರುತಿಸಿರುವ ಸ್ಥಳಗಳಿಗೆ ಗನ್ ಮ್ಯಾನ್ ಭದ್ರತೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ