Pope Francis Passes away: ಕ್ಯಾಥೋಲಿಕ್ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

Krishnaveni K

ಸೋಮವಾರ, 21 ಏಪ್ರಿಲ್ 2025 (14:42 IST)
Photo Credit: X
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕ್ಯಾಥೊಲಿಕ್ ಪರಮೋಚ್ಛ ಗುರು ಪೋಪ್ ಫ್ರಾನ್ಸಿನ್ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
 

ಈ ಬಗ್ಗೆ ವ್ಯಾಟಿಕನ್ ಪ್ರಕಟಣೆ ತಿಳಿಸಿದೆ. ಸುದೀರ್ಘ ಕಾಲದಿಂದ ನ್ಯುಮೋನಿಯಾ ಸಂಬಂಧೀ ಅನಾರೋಗ್ಯದಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ ಇಂದು ಬೆಳಿಗ್ಗೆ 7.30 ಕ್ಕೆ ಇಹಲೋಕ ತ್ಯಜಿಸಿದರು ಎಂದು ತಿಳಿದುಬಂದಿದೆ.  ಫೆಬ್ರವರಿ 14 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹಾಗಿದ್ದರೂ ಭಕ್ತರಿಗೆ ಆಗಾಗ ಸಂದೇಶಗಳನ್ನು ನೀಡುತ್ತಲೇ ಇದ್ದರು. ನಿನ್ನೆ ಈಸ್ಟರ್ ದಿನಕ್ಕೂ ಭಕ್ತರಿಗೆ ಶುಭಾಶಯ ಸಂದೇಶ ರವಾನಿಸಿದ್ದರು. ಕಳೆದ ವಾರ ಸೇಂಟ್ ಪೀಟರ್ಸ್ ಚೌಕ್ ನಲ್ಲಿ ನಡೆದ ಕ್ಯಾಥೊಲಿಕ್ ಚರ್ಚ್ ನ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿರಲಿಲ್ಲ.

ಅನಾರೋಗ್ಯದ ಕಾರಣದಿಂದ ಅವರಿಗೆ ಸಂಪೂರ್ಣವಾಗಿ ವಿಶ್ರಾಂತಿ ನೀಡಲು ವೈದ್ಯರು ಸೂಚಿಸಿದ್ದರು. ಇದೀಗ ಅವರ ನಿಧನ ವಾರ್ತೆ ತಿಳಿಯುತ್ತಿದ್ದಂತೇ ಸಾಕಷ್ಟು ಜನ ಭಕ್ತರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ