ಡಿಕೆ ಶಿವಕುಮಾರ್ ಹಾಗೇ ಹೇಳಬಾರದಿತ್ತು: ಮಲ್ಲಿಕಾರ್ಜುನ ಖರ್ಗೆ

Sampriya

ಬುಧವಾರ, 27 ಆಗಸ್ಟ್ 2025 (18:21 IST)
ಬೆಂಗಳೂರು: ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಆರ್‌ಎಸ್‌ಎಸ್ ಗೀತೆಯನ್ನು ಪಠಿಸಿದ್ದು, ಕ್ಷಮೆಯಾಚಿಸಿದ ನಂತರ “ಮುಚ್ಚಿದ ಅಧ್ಯಾಯ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, 'ಮುಚ್ಚಿದ ಪ್ರಕರಣ'ವನ್ನು ಮತ್ತೆ ತೆರೆಯುವುದಿಲ್ಲ. ಕ್ಷಮೆ ಕೇಳಿದ ನಂತರ ವಿಷಯ ಮುಗಿದಿದೆ ಎಂದು ಪ್ರತಿಕ್ರಿಯಿಸಿದರು.

ಮುಂದೆ ಇಂತಹ ಕೃತ್ಯ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದರು.

"ಅವರು ಹಾಗೆ ಹೇಳಬಾರದಿತ್ತು ಆದರೆ ಅವರು ಅದನ್ನು ಹೇಳಿದರು. ಈಗ ಅವರು ಕ್ಷಮೆಯಾಚಿಸಿದ್ದಾರೆ. ಮುಚ್ಚಿದ ವಿಚಾರದ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲು ನಾನು ಬಯಸುವುದಿಲ್ಲ ಎಂದರು.

11 ಜನರ ಸಾವಿಗೆ ಕಾರಣವಾದ ಸ್ಟೇಡಿಯಂ ಕಾಲ್ತುಳಿತದ ಚರ್ಚೆಯ ಸಂದರ್ಭದಲ್ಲಿ ರಾಜ್ಯ ವಿಧಾನಸಭೆಯೊಳಗೆ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಶಿವಕುಮಾರ್ ಆರ್‌ಎಸ್‌ಎಸ್ ಗೀತೆ 'ನಮಸ್ತೆ ಸದಾ ವತ್ಸಲೇ ಮಾತೃಭೂಮಿ...' ಹಾಡಿದ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಿರುಗಾಳಿ ಬೀಸಲಾರಂಭಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ