ಕಾಲ್‌ಗರ್ಲ್‌ಗಳಿಗಾಗಿಯೇ ಪ್ರತ್ಯೇಕ ಡಿಪಾರ್ಟ್‌ಮೆಂಟ್ ತೆಗೆದಿದ್ದ ದೇಶದ ಅಧ್ಯಕ್ಷ

ಮಂಗಳವಾರ, 5 ಡಿಸೆಂಬರ್ 2023 (12:58 IST)
ಮೊಹಮ್ಮದ್ ಗಡಾಫಿಯು ಕಾಮಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ತನ್ನ ಸುತ್ತಲೂ ಮಹಿಳಾ ಅಂಗರಕ್ಷಕಿಯನ್ನೇ ನೇಮಿಸಿಕೊಳ್ಳುತ್ತಿದ್ದ. ಗಡಾಫಿಯ ಕಾಮ ನೀಗಿಸಲು ಪ್ರತಿನಿತ್ಯವೂ ಒಂದೊಂದು ಹೆಣ್ಣನ್ನು ಇಲಾಖೆಯ ಸಿಬ್ಬಂದಿಗಳು ಹುಡುಕಿ ತರಬೇಕಿತ್ತು ಎಂಬ ಅಚ್ಚರಿಯ ಸುದ್ದಿಯನ್ನು ಗಡಾಫಿಯ ಭದ್ರತಾ ಮುಖ್ಯಸ್ಥ ಮನ್ಸೂರ್‌ ದವ್‌ ಬಿಚ್ಚಿಟ್ಟಿದ್ದಾನೆ.
 
ಗಡಾಫಿ ಸತ್ತು ಎರಡು ವರ್ಷಗಳು ಕಳೆದ ನಂತರ ಒಂದೊಂದೇ ಅಚ್ಚರಿಯ ಸುದ್ದಿಗಳು ಕೇಳಿ ಬರುತ್ತಿವೆ. ಗಡಾಫಿಯ ಕಾಮ ಪುರಾಣದ ಒಂದೊಂದೇ ಅಧ್ಯಾಯಗಳು ತೆರೆದುಕೊಳ್ಳುತ್ತಿವೆ. ಗಡಾಫಿಯ ಹಾಸಿಗೆಗೆ ಪ್ರತಿ ನಿತ್ಯವೂ ಒಂದೊಂದು ಹೆಣ್ಣನ್ನು ಹುಡುಕಿ ಕಳಿಸಲು ಒಂದು ಸರ್ಕಾರಿ ಇಲಾಖೆಯನ್ನೇ ಸ್ಥಾಪಿಸಿದ್ದನಂತೆ.
 
2011 ಡಿಸೆಂಬರ್‌ ತಿಂಗಳಲ್ಲಿ ಅಮೇರಿಕಾದ ನ್ಯಾಟೋ ಪಡೆಗಳು ಗಡಾಫಿಯನ್ನು ಹೊಡೆದುರುಳಿಸಿದಾಗ, ಗಡಾಫಿ ಕೋಟೆಯೊಳಗೆ ಹಲವಾರು ಹುಡುಗಿಯರು ಇದ್ದರು. ಅವರೆಲ್ಲಾ ಹಗಲು ರಾತ್ರಿ ಎನ್ನದೆ, ಗಡಾಫಿಯ ಕಾಮದ ಹಸಿವನ್ನು ನೀಗಿಸುತ್ತಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ