ಉರಿ ಸೇನಾ ಕೇಂದ್ರದ ಮೇಲೆ ದಾಳಿ ಭಾರತದ ಸೃಷ್ಟಿ: ಪಾಕ್ ರಕ್ಷಣಾ ಸಚಿವ

ಮಂಗಳವಾರ, 27 ಸೆಪ್ಟಂಬರ್ 2016 (18:35 IST)
ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ರಾಷ್ಟ್ರಗಳನ್ನು ಏಕಾಂಗಿಯಾಗಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಾಗ್ದಾಳಿ ನಡೆಸುತ್ತಿರುವಂತೆ ಪಾಕ್ ರಕ್ಷಣಾ ಸಚಿವ ಖ್ವಾಜಾ. ಎಂ. ಆಸಿಫ್, ಉರಿ ಸೇನಾ ಕೇಂದ್ರದ ಮೇಲೆ ದಾಳಿ ಭಾರತದ ಸೃಷ್ಟಿ ಎಂದು ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ.  

ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದ ಮೇಲೆ ನಡೆದ ಭೀಕರ ಉಗ್ರರ ದಾಳಿ ಭಾರತದ ಸೃಷ್ಟಿಯಾಗಿದೆ. ಇದರಲ್ಲಿ ಪಾಕಿಸ್ತಾನದ ಕೈವಾಡವಿಲ್ಲ ಎಂದು ಅನಾಗರಿಕ ಹೇಳಿಕೆ ನೀಡಿದ್ದಾರೆ.
 
ಪಾಕಿಸ್ತಾನದಲ್ಲಿ ನಡೆದ ಅನೇಕ ಉಗ್ರರ ದಾಳಿಗಳಲ್ಲಿ ಭಾರತದ ಕೈವಾಡವಿದೆ. ಅದರಂತೆ, ಉರಿ ಸೇನಾ ಕೇಂದ್ರದ ಮೇಲೆ ನಡೆದ ದಾಳಿ ಕೂಡಾ ಭಾರತದ ಪ್ರೇರಿತವಾಗಿದೆ ಎಂದು ಪಾಕಿಸ್ತಾನದ ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 
 
ಕಾಶ್ಮಿರದಲ್ಲಿ ಬಾರತೀಯ ಸೇನೆ ನಡೆಸುತ್ತಿರುವ ದೌರ್ಜನ್ಯದ ಗಮನವನ್ನು ಬೇರೆ ಕಡೆ ತಿರುಗಿಸಲು ಭಾರತ ಉರಿ ಸೇನಾಕೇಂದ್ರದ ದಾಳಿಯನ್ನು ಸೃಷ್ಟಿಸಿದೆ. ಭಾರತೀಯರಿಗೆ ಮುಂಬರುವ ದಿನಗಳಲ್ಲಿ ದುಬಾರಿಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. 
 
ಇದಕ್ಕಿಂತ ಮೊದಲು, ಪಾಕಿಸ್ತಾನದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಉರಿ ಸೇನಾ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎನ್ನುವ ಆರೋಪ ಭಾರತ ಮಾಡುತ್ತಿದೆ. ಭಾರತದಲ್ಲಿ ನಡೆಯವ ಪ್ರತಿಯೊಂದು ಘಟನೆಗೂ ಪಾಕ್ ಕಾರಣವೆನ್ನುವುದು ಭಾರತದ ದೀರ್ಘಾವಧಿಯ ಹವ್ಯಾಸವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ