ಅಮೆರಿಕ ರಾಯಭಾರಿ ಕಚೇರಿಯ ಕೌನ್ಸುಲ್‌ರಾಗಿ ರಾಬರ್ಟ್ ಬುರ್ಗೆಸ್ ಅಧಿಕಾರ ಸ್ವೀಕಾರ

ಸೋಮವಾರ, 7 ಆಗಸ್ಟ್ 2017 (18:09 IST)
ಯುನೈಟೆಡ್ ಸ್ಟೇಟ್ಸ್ ಕಾನ್ಸುಲ್ ಜನರಲ್ ಆಗಿ ಆಗಸ್ಟ್ 7 (2017) ರಂದು ರಾಬರ್ಟ್ ಬುರ್ಗೆಸ್ ಅಧಿಕಾರ ಸ್ವೀಕರಿಸಿದ್ದಾರೆ. 
 
ವಿಶೇಷವಾಗಿ ಭಾರತ- ಅಮೆರಿಕ ಸಂಬಂಧಗಳು ಉತ್ತಮವಾಗಿರುವ ಈ ಅದ್ಭುತ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್ ಪ್ರತಿನಿಧಿಯಾಗಿ ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಿಸುವ ಸುವರ್ಣಾವಕಾಶ ದೊರೆತಿದೆ. ತಮಿಳುನಾಡು, ಕರ್ನಾಟಕ, ಕೇರಳ ರಾಜ್ಯಗಳಲ್ಲೂ ನಮ್ಮ ಉದ್ದೇಶಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ ಎಂದು ಬುರ್ಗೆಸ್ಸ್ ತಿಳಿಸಿದ್ದಾರೆ.
 
 ಚೆನ್ನೈಗೆ ಆಗಮಿಸುವ ಮೊದಲು, ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್‌ನಲ್ಲಿ ಬ್ಯೂರೋ ಆಫ್ ಸೌತ್ ಮತ್ತು ಸೆಂಟ್ರಲ್ ಏಷ್ಯನ್ ವ್ಯವಹಾರಗಳ ಪ್ರಾದೇಶಿಕ ವಿಷಯಗಳ ಬಗ್ಗೆ ಕಾನ್ಸಲ್ ಜನರಲ್ ಬರ್ಗೆಸ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅದಕ್ಕೂ ಮುಂಚೆ, ತಜಾಕಿಸ್ತಾನ್ ದಶಾನ್ಬೆದಲ್ಲಿನ ಯುಎಸ್ ರಾಯಭಾರ ಕಚೇರಿಯಲ್ಲಿ ಉಪ ಮುಖ್ಯಸ್ಥರಾಗಿದ್ದರು. ರಾಜತಾಂತ್ರಿಕ ಹುದ್ದೆಯಲ್ಲಿ ಬಿಶ್ಕೆಕ್, ಕಿರ್ಗಿಸ್ತಾನ್; ಬಾಕು, ಅಜೆರ್ಬೈಜಾನ್; ಲಿಲೊಂಗ್ವೆ, ಮಲಾವಿ; ಮತ್ತು ಕರಾಚಿ, ಪಾಕಿಸ್ತಾನ ದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವಿದೇಶಿ ಸೇವೆಗೆ ಆಗಮಿಸುವ ಮುಂಚೆ ಬುರ್ಗೆಸ್ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. 
 ಇಲಿನೊಯಿಸ್ ವೌಕೇಗನ್ ಮೂಲದ ಕಾನ್ಸುಲ್ ಜನರಲ್ ಬರ್ಗೆಸ್, ಕೊಲೊರೆಡೊ ಕಾಲೇಜಿನಲ್ಲಿ ಇತಿಹಾಸ ವಿಭಾಗದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ. , ಮತ್ತು ಆಸ್ಟಿನ್ ಟೆಕ್ಸಾಸ್ ವಿಶ್ವವಿದ್ಯಾಲಯದ ಎಂಬಿಎ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ಹಾಸ್ಟಿಂಗ್ಸ್ ಕಾಲೇಜ್ ಆಫ್ ದಿ ಲಾ ದಿಂದ ಜ್ಯೂರಿಸ್ ಡಾಕ್ಟರ್ ಪದವಿಯನ್ನು ಅವರು ಹೊಂದಿದ್ದಾರೆ. ಯು.ಎಸ್.ನ ನ್ಯಾಷನಲ್ ವಾರ್ ಕಾಲೇಜಿನಿಂದ 2012ರಲ್ಲಿ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದಲ್ಲಿ ಸೈನ್ಸ್ ಮಾಸ್ಟರ್ ಪದವೀಧರರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ