ನವದೆಹಲಿ : ರಷ್ಯಾ ತನ್ನ ಕಚ್ಚಾ ತೈಲದ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಿದ್ದು, ಭಾರತ ಇದೀಗ ರಷ್ಯಾದಿಂದ ಭಾರೀ ಪ್ರಮಾಣದ ತೈಲ ಖರೀದಿಗೆ ಮುಂದಾಗಿದೆ.
ಭಾರೀ ಬೆಲೆ ಇಳಿಕೆ ಹಿನ್ನೆಲೆಯಲ್ಲಿ ಭಾರತ ರಷ್ಯಾದಿಂದ 3.5 ಮಿಲಿಯನ್(35 ಲಕ್ಷ) ಬ್ಯಾರೆಲ್ ತೈಲ ಖರೀದಿಗೆ ಮುಂದಾಗಿದೆ. ಆದರೆ ಅದನ್ನು ಭಾರತಕ್ಕೆ ತರಿಸುವುದು ಸವಾಲಿನ ವಿಷಯವಾಗಿತ್ತು.
ಇದೀಗ ರಷ್ಯಾ ಶಿಪ್ಪಿಂಗ್ ಮತ್ತು ವಿಮೆಯ ಜವಾಬ್ದಾರಿ ವಹಿಸಿದ್ದು ಭಾರತಕ್ಕೆ ತೈಲ ರವಾನಿಸುವಲ್ಲಿ ಸಹಾಯ ಮಾಡುವುದಾಗಿ ತಿಳಿಸಿದೆ.
ಭಾರತ ರಷ್ಯಾದಿಂದ ತರಿಸಿಕೊಳ್ಳುತ್ತಿರುವ ತೈಲದ ಸ್ಥಳಾಂತರ ಹಾಗೂ ಸಬ್ಸಿಡಿಗಳ ಬಗ್ಗೆ ರಷ್ಯಾ ಜವಾಬ್ದಾರಿವಹಿಸುತ್ತದೆ ಎಂದು ತಿಳಿಸಿದೆ. ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.
ರಷ್ಯಾದೊಂದಿಗೆ ಡಾಲರ್ ಮೂಲಕ ವ್ಯವಹಾರ ನಡೆಸಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಹೀಗಾಗಿ ರುಪಿ ರೂಬೆಲ್ ಮೂಲಕ ವ್ಯವಹಾರ ನಡಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಇದು ಅಂತಿಮವಾಗಲಿದೆ ಎಂದು ಮೂಲಗಳು ತಿಳಿಸಿವೆ.