ಯೋಧರ ತಾಯಂದಿರ ಬಳಿ ಝೆಲೆನ್ಸ್ಕಿ ಮನವಿ ಏನು ಗೊತ್ತ?

ಸೋಮವಾರ, 14 ಮಾರ್ಚ್ 2022 (10:03 IST)
ಕೀವ್ : ಉಕ್ರೇನ್ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಮಂದುವರೆಸಿದೆ. ರಷ್ಯಾ ದಾಳಿಗೆ ಸಿಲುಕಿರುವ ಉಕ್ರೇನ್ ಮಂದಿ ಪ್ರಾಣ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಉದ್ವೀಗ್ನ ಪರಿಸ್ಥಿತಿಯ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಯೋಧರ ತಾಯಂದಿರ ಬಳಿ ಮನವಿ ಮಾಡಿದ್ದಾರೆ. ಬಲವಂತಕ್ಕೆ ಒಳಗಾಗಿ ಮಕ್ಕಳನ್ನು ಯುದ್ಧಕ್ಕೆ ಕಳುಹಿಸಿರುವ ತಾಯಂದಿರಿಗೆ ನಾನು ಇದನ್ನು ಮತ್ತೊಮ್ಮೆ ಹೇಳಲು ಬಯಸುತ್ತೇನೆ.

ನಿಮ್ಮ ಮಕ್ಕಳನ್ನು ವಿದೇಶದಲ್ಲಿ ಯುದ್ಧಕ್ಕೆ ಕಳುಹಿಸಬೇಡಿ. ನಮ್ಮ ದೇಶದ ಮೇಲೆ ನಡೆಯುತ್ತಿರುವ ಯುದ್ಧದಲ್ಲಿ ಭಾಗವಹಿಸದಂತೆ ನಿಮ್ಮ ಮಕ್ಕಳನ್ನು ತಡೆಯಿರಿ ಎಂದು ಟೆಲಿಗ್ರಾಮ್ನಲ್ಲಿ ಬಿಡುಗಡೆ ಮಾಡಿದ ವೀಡಿಯೋ ಸಂದೇಶದಲ್ಲಿ ಝೆಲೆನ್ಸ್ಕಿ ಮನವಿ ಮಾಡಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ