ಚಂದಮಾಮನ ವಯಸ್ಸೆಷ್ಟು? ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ ನೋಡಿ!
ಚಿಕ್ಕಮಕ್ಕಳಿಗಂತೂ ಚಂದಮಾಮನನ್ನು ತೋರಿಸಿ ಎಷ್ಟು ಬಾರಿಸಿ ನಗಿಸಿಲ್ಲ ಹೇಳಿ? ಹಾಗಿದ್ದರೆ ನಾವು-ನೀವು ಇಷ್ಟಪಡುವ ಚಂದಮಾಮನ ನಿಜ ವಯಸ್ಸೆಷ್ಟು ಎಂದು ನಿಮಗೆ ಗೊತ್ತಾ?
ಭೂಮಿ ಸೃಷ್ಟಿಯಾಗಿ 465 ಕೋಟಿ ವರ್ಷಗಳಾಗಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಹಾಗಿದ್ದರೆ ಚಂದ್ರ ಹುಟ್ಟಿ ಎಷ್ಟು ವರ್ಷಗಳಾಗಿವೆ ಎಂಬುದಕ್ಕೆ ವಿಜ್ಞಾನಿಗಳು ಈಗ ಉತ್ತರ ಕಂಡುಕೊಂಡಿದ್ದಾರೆ. ಹೊಸ ವಿಶ್ಲೇಷಣೆಗಳ ಪ್ರಕಾರ ಚಂದ್ರನಿಗೆ 446 ಕೋಟಿ ವರ್ಷಗಳಾಗಿವೆ. ಜಿಯೋಕೆಮಿಕಲ್ ಪಸ್ಪೆಕ್ಟಿವ್ಸ್ ಲೆಟರ್ಸ್ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನಾ ವರದಿಯಲ್ಲಿ ಈ ವಿಚಾರವನ್ನು ಬರೆಯಲಾಗಿದೆ.
400 ಕೋಟಿ ವರ್ಷಗಳ ಹಿಂದೆ ಭೂಮಿಗೆ ಮಂಗಳ ಗ್ರಹದ ಗಾತ್ರದ ಕಾಯವೊಂದು ಅಪ್ಪಳಿಸಿದಾಗ ಹೊರಹಾರಿದ ತುಂಡು ಚಂದ್ರನಾಗಿ ರೂಪುಗೊಂಡಿತು ಎಂದು ವಿಜ್ಞಾನಿಗಳು ಹೇಳುತ್ತಾರೆ.