ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ದಾಳಿಯಿಂದ ವಿದೇಶಿ ಪ್ರಜೆಗಳು ಸೇರಿದಂತೆ 250 ಕ್ಕೂ ಹೆಚ್ಚು ಮಂದಿ ಪ್ರಾಣಬಿಟ್ಟಿದ್ದಾರೆ. ಇದರಿಂದ ನಲುಗಿ ಹೋಗಿರುವ ಶ್ರೀಲಂಕಾ ಇದೀಗ ಭದ್ರತೆಯ ದೃಷ್ಟಿಯಿಂದ ಬುರ್ಖಾ ಧರಿಸಲು ನಿಷೇಧ ಹೇರಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಶ್ರೀಲಂಕಾ ಅಧ್ಯಕ್ಷರು, ಬುರ್ಖಾ ಮೂಲಭೂತವಾದದ ಸಂಕೇತವಾಗಿದ್ದು, ಇದರಿಂದ ಭದ್ರತೆಗೆ ತೊಡಕಾಗುತ್ತಿದೆ. ಆದ್ದರಿಂದ ಬುರ್ಖಾಕ್ಕೆ ನಿಷೇಧ ಹೇರಲಾಗಿದೆ. ದುಷ್ಕರ್ಮಿಗಳು ತಪ್ಪಿಸಿಕೊಳ್ಳಲು ಯಾವೊಂದು ಅವಕಾಶವೂ ಸಿಗದಂತೆ ಮಾಡಲು ಹೀಗೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.