ಸ್ವಚ್ಚತಾ ಆಂದೋಲನದಲ್ಲಿ ಈ ಬಾಲಕಿ ಸಂಗ್ರಹಿಸಿದ ತ್ಯಾಜ್ಯ ಎಷ್ಟೆಂದು ಕೇಳಿದ್ರೆ ಶಾಕ್ ಆಗ್ತೀರಾ?

ಗುರುವಾರ, 13 ಜೂನ್ 2019 (06:21 IST)
ದುಬೈ : ದುಬೈನ ಸಂಸ್ಥೆಯೊಂದು ನಡೆಸಿದ ಸ್ವಚ್ಚತಾ ಆಂದೋಲನದಲ್ಲಿ ಬಾಲಕಿಯೊಬ್ಬಳು ಸುಮಾರು 15ಸಾವಿರ ಕೆಜಿ ಪೇಪರ್ ಸಂಗ್ರಹಿಸಿ ಎಲ್ಲರ ಗಮನ ಸೆಳೆದಿದ್ದಾಳೆ.
ದುಬೈನ ಎಮರೈಟ್ಸ್ ಪರಿಸರ ಸಂಸ್ಥೆ ಪ್ರತಿವರ್ಷ ಸ್ವಚ್ಛತೆ ಹಾಗೂ ಮರುಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಂದೋಲನ ಆಯೋಜಿಸುತ್ತದೆ. ಈ ಬಾರಿಯ ಆಂದೋಲನದಲ್ಲಿ ಕಾಗದ, ಪ್ಲಾಸ್ಟಿಕ್‌, ಗಾಜು, ಕ್ಯಾನ್‌ಗಳು ಮತ್ತು ಮೊಬೈಲ್‌ ಫೋನ್‌ಗಳು ಸೇರಿ ಬರೋಬ್ಬರಿ 73,393 ಮೆಟ್ರಿಕ್‌ ಟನ್‌ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ.


ಇದರಲ್ಲಿ ದುಬೈನಲ್ಲಿ ಪೋಷಕರ ಜತೆ ನೆಲೆಸಿರುವ ಭಾರತೀಯ ಮೂಲದ ನಿಯಾ ಟೋನಿ 15,000 ಕೆಜಿ ತೂಕದ ಪೇಪರ್‌ ತ್ಯಾಜ್ಯ ಸಂಗ್ರಹಿಸಿ ಎಲ್ಲರು ನಿಬ್ಬೆರಗಾಗುವಂತೆ ಮಾಡಿದ್ದಾಳೆ. ಈ ಬಗ್ಗೆ ಮಾತನಾಡಿರುವ ಟೋನಿ ನಾನು ವಸ್ತುಗಳ ಪುನರ್‌ ಬಳಕೆ ಬಗ್ಗೆ ನಾನಿದ್ದ ಪ್ರದೇಶದಲ್ಲಿ ನಿರಂತರವಾಗಿ ಅಭಿಯಾನ ನಡೆಸುತ್ತಿದ್ದೆ. ಪ್ರತಿಯೊಬ್ಬರ ಮನೆಗೆ ಹೋಗಿ ಕಾಗದ ತ್ಯಾಜ್ಯ, ಓದಿ ಮುಗಿದ ಪತ್ರಿಕೆ ಇತ್ಯಾದಿಗಳನ್ನು ಸಂಗ್ರಹಿಸಿ ತರುತ್ತಿದ್ದೆ ಎಂದು ಹೇಳಿದ್ದಾಳೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ