ಬಟ್ಟೆ ಅಂಗಡಿಯಲ್ಲಿ ಡ್ರೆಸ್ ಹಾಕಿ ನೋಡುತ್ತಿದ್ದ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ ಸೇಲ್ಸ್ ಮೆನ್
ಮಂಗಳವಾರ, 19 ಫೆಬ್ರವರಿ 2019 (07:38 IST)
ದುಬೈ : ಬಟ್ಟೆ ಖರೀದಿಸಲು ಬಂದಿದ್ದ 15 ವರ್ಷದ ಹುಡುಗಿ ಮೇಲೆ 31 ವರ್ಷದ ಭಾರತೀಯ ಸೇಲ್ಸ್ ಮೆನ್ ನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ದುಬೈನ ಮಾಲ್ ವೊಂದರಲ್ಲಿ ನಡೆದಿದೆ.
ಸಾಂಪ್ರದಾಯಿಕ ಅರೇಬಿಕ್ ಡ್ರೆಸ್ ಆಯ್ಕೆ ಮಾಡಿದ ಹುಡುಗಿ ಹಿಂದಿನ ಬಟನ್ ಹಾಕಲು ಸೇಲ್ಸ್ ಮೆನ್ ಸಹಾಯ ಕೇಳಿದ್ದಾಳೆ. ಆಗ ಸೇಲ್ಸ್ ಮೆನ್ ಹುಡುಗಿಯ ತಾಯಿ, ಬೇರೆಯವರ ಜೊತೆ ಮಾತನಾಡುತ್ತಿರುವುದನ್ನು ಕಂಡು ಆ ಅವಕಾಶವನ್ನು ದುಪಯೋಗಪಡಿಸಿಕೊಂಡ ಆತ ಹುಡುಗಿ ಅಂಗವನ್ನು ತಪ್ಪಾಗಿ ಸ್ಪರ್ಶಿಸಿದ್ದಾನೆ.
ಆಗ ಹುಡುಗಿ ತಾಯಿಯ ಬಳಿ ಈ ವಿಚಾರದ ತಿಳಿಸಿದ್ದು, ತಕ್ಷಣ ತಾಯಿ ಸೇಲ್ಸ್ ಮೆನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.