ಈ ಡ್ರೆಸ್ ತಯಾರಿಸಿದ್ದು ಯಾವುದರಿಂದ ಎಂದು ತಿಳಿದರೆ ಶಾಕ್ ಆಗ್ತೀರಾ

ಭಾನುವಾರ, 5 ಮೇ 2019 (07:09 IST)
ನ್ಯೂಯಾರ್ಕ್ : ಪ್ರತಿಭೆಯೊಂದಿದ್ದರೆ ಎಂತಹ ಅಸಾಧ್ಯವಾದ ಕಾರ್ಯಗಳನ್ನು ಸಾಧಿಸಿ ತೋರಿಸಬಹುದು ಎನ್ನುವುದನ್ನು ಇದೀಗ ನ್ಯೂಯಾರ್ಕ್ ನ ಗೃಹಿಣಿಯೊಬ್ಬಳು ಮಾಡಿ ತೋರಿಸಿದ್ದಾರೆ.


ಹೌದು. ನ್ಯೂಯಾರ್ಕ್ ನ ಕಾರಿ ಕರ್ಲೇಟೊ ಎಂಬ ಗೃಹಿಣಿಯೊಬ್ಬಳು ಟಾಯ್ಲೆಟ್ ಪೇಪರ್ ನಲ್ಲಿ ವೆಡ್ಡಿಂಗ್ ಡ್ರೆಸ್ ಸಿದ್ಧಪಡಿಸಿದ್ದು, ಆಕೆಯ ಸಾಧನೆಗೆ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಡ್ರೆಸ್ ಸಿದ್ಧಪಡಿಸಲು ಆಕೆಗೆ 3 ತಿಂಗಳ ಬೇಕಾಯ್ತಂತೆ. ಹಾಗೇ ಈ ಡ್ರೆಸ್ ಸಿದ್ಧಪಡಿಸಲು ಆಕೆಗೆ ಸಾಕಷ್ಟು ತೊಂದರೆಗಳು ಎದುರಾಗಿದ್ದವಂತೆ.


ಅಲ್ಲದೇ ಈ ಡ್ರೆಸ್ ಸಿದ್ಧಪಡಿಸಲು ಆಕೆ ಟಾಯ್ಲೆಟ್ ಕಾಗದ, ಅಂಟು, ಟೇಪ್ ಬಳಸಿದ್ದಾಳಂತೆ. ಅಷ್ಟೆ ಅಲ್ಲದೆ ನ್ಯೂಯಾರ್ಕ್ ನಲ್ಲಿ ನಡೆದ ಫ್ಯಾಷನ್ ಸ್ಪರ್ಧೆಯಲ್ಲಿ ಈ ಉಡುಪು 6 ಲಕ್ಷ 37 ಸಾವಿರ ರೂಪಾಯಿ ಬಹುಮಾನ ಪಡೆದುಕೊಂಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ