ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇಂಗ್ಲೆಂಡ್ ನ ಸಂಶೋಧನಾ ಸಂಸ್ಥೆಯಿಂದ ಶಾಕಿಂಗ್ ನ್ಯೂಸ್

ಭಾನುವಾರ, 19 ಆಗಸ್ಟ್ 2018 (07:24 IST)
ಇಂಗ್ಲೆಂಡ್ : ಇಂಗ್ಲೆಂಡ್ ಮೂಲದ ಸಂಶೋಧನಾ ಸಂಸ್ಥೆಯೊಂದು ಸ್ಮಾರ್ಟ್ ಫೋನ್ ಬಳಕೆದಾರರಿಗೆ ಶಾಕಿಂಗ್ ವಿಚಾರವೊಂದನ್ನು ತಿಳಿಸಿದೆ.


ಅದೇನೆಂದರೆ ಪೋರ್ಟ್ಸ್ಮೌತ್ ಮೂಲದ ಗ್ಯಾಜೆಟ್ ಇನ್ಶುರೆನ್ಸ್ ಪ್ರೊವೈಡರ್ ಸಂಶೋಧನಾ ಸಂಸ್ಥೆ ಸ್ಮಾರ್ಟ್ ಫೋನ್ ಮೇಲೆ ಸಂಶೋಧನೆ ನಡೆಸಿದ್ದು, ಅದರ ವರದಿಯಲ್ಲಿ ಶೌಚಾಲಯದಲ್ಲಿರುವ ಸೂಕ್ಷ್ಮ ಜೀವಾಣುಗಳಿಗಿಂತಲೂ, ಸ್ಮಾರ್ಟ್ ಫೋನ್ ಸ್ಕ್ರೀನ್ ಮೇಲೆ ಸೂಕ್ಷ್ಮ ಜೀವಾಣುಗಳು ಹೆಚ್ಚಿರುತ್ತವೆ ಎಂಬ ವಿಚಾರ ಬೆಳಕಿಗೆ ಬಂದಿದೆ.


ಸಂಶೋಧನಾ ವಿದ್ಯಾರ್ಥಿಗಳು ಐಫೋನ್-6, ಸ್ಯಾಮ್ಸಂಗ್ ಗ್ಯಾಲಕ್ಸಿ 8 ಮತ್ತು ಗೂಗಲ್ ಪಿಕ್ಸೆಲ್ ಮೊಬೈಲ್ ಗಳ ಮೇಲೆ  ಹೆಚ್ಚಾಗಿ ಸಂಶೋಧನೆ ನಡೆಸಿದ್ದು, ಅದರ ಪ್ರಕಾರ ಟಾಯ್ಲೆಟ್ ನಲ್ಲಿ ಸೂಕ್ಷ್ಮ ಜೀವಾಣು ಗಳಪ್ರಮಾಣ ಕೇವಲ 24 ಆಗಿದ್ದರೆ, ಮೊಬೈಲ್ ಸ್ಕ್ರೀನ್ ಮೇಲೆ ಸುಮಾರು 254.9 ಸೂಕ್ಷ್ಮ ಜೀವಾಣು ಘಟಕಗಳು ಕಂಡುಬಂದಿದೆ.


ಅಲ್ಲದೇ ಮೊಬೈಲ್ ಸ್ಕ್ರೀನ್ ಮೇಲಿನ ಈ ಸೂಕ್ಷ್ಮ ಜೀವಿಗಳಿಂದ ಚರ್ಮ ಸಮಸ್ಯೆ ಹಾಗೂ ಹಲವು ಆರೋಗ್ಯ ಸಮಸ್ಯೆ ಬರಬಹುದೆಂದು ವರದಿ ತಿಳಿಸಿದೆ. ಹಾಗೇ ಮೊಬೈಲ್ ಸ್ಕ್ರೀನ್ ಒರೆಸದೆ ಇರೋದ್ರಿಂದ, ಸೂಕ್ಷ್ಮಾಣುಗಳು ಕೂಡಿಕೊಳ್ಳುತ್ತವೆ ಎಂದು ವರದಿ ಹೇಳಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ