ಪತ್ನಿ ಸಾವು, ಆಕೆಯ ತಂಗಿಯನ್ನೇ ಮತ್ತೇ ಮದುವೆಯಾದ ಭೂಪನ ಡಿಮ್ಯಾಂಡ್ ಕೇಳಿದ್ರೆ ಶಾಕ್‌

Sampriya

ಶನಿವಾರ, 30 ಆಗಸ್ಟ್ 2025 (18:36 IST)
Photo Credit X
ಕನೌಜ್: ಅನಾರೋಗ್ಯದಲ್ಲಿ ಪತ್ನಿ ಸಾವನ್ನಪ್ಪಿದ ಬಳಿಕ, ಆಕೆಯ ತಂಗಿಯನ್ನು ಮದುವೆಯಾದ ವ್ಯಕ್ತಿ ಇದೀಗ ಆಕೆಯ ಎರಡನೇ ತಂಗಿಯೂ ಬೇಕೆದ್ದು ವಿದ್ಯುತ್ ಟವರ್ ಏರಿದ ಘಟನೆ ಉತ್ತರ ಪ್ರದೇಶದ ಕನೌಜ್‌ನಲ್ಲಿ ವರದಿಯಾಗಿದೆ. 

ಈ ಹೈಡ್ರಾಮಾ ನಡೆಸಿದ ವ್ಯಕ್ತಿಯನ್ನು ರಾಜ್ ಸಕ್ಸೇನಾ ಎಂದು ಗುರುತಿಸಲಾಗಿದೆ. 2021 ರಲ್ಲಿ ರಾಜ್ ಸಕ್ಸೇನಾ ಮದುವೆಯಾಗಿದ್ದ. ಮದುವೆಯ ಒಂದು ವರ್ಷದ ನಂತರ ಆಕೆ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದಾಳೆ. ಅದರ ಬೆನ್ನಲ್ಲೇ ಮೃತ ಪತ್ನಿಯ ಸಹೋದರಿಯನ್ನು ಮತ್ತೇ ವಿವಾಹವಾಗಿದ್ದಾನೆ. 

ಎರಡು ವರ್ಷಗಳ ನಂತರ ಮೊದಲ ಪತ್ನಿಯಾ ಎರಡನೇ ಸಹೋದರಿಯನ್ನು ಪ್ರೀತಿಸುತ್ತಿರುವುದಾಗಿ, ಆಕೆ ಬೇಕೆಂದು ವಿದ್ಯುತ್ ಟವರ್‌ ಏರಿದ್ದಾನೆ. 

ಗುರುವಾರ ಬೆಳಗ್ಗೆ ತನ್ನ ತಂಗಿಯನ್ನು ಮದುವೆಯಾಗುವುದಾಗಿ ಪತ್ನಿಗೆ ತಿಳಿಸಿದ್ದ. ಆಕೆಯ ಪ್ರಸ್ತಾಪಕ್ಕೆ ಅವಳು ಬೇಡ ಎಂದು ಹೇಳಿದಾಗ, ಸಕ್ಸೇನಾ ಬಾಲಿವುಡ್ ಚಲನಚಿತ್ರ "ಶೋಲೆ" ಯ ದೃಶ್ಯದ ಹಾಗೇ ಹೈಡ್ರಾಮಾ ನಡೆಸಿದ್ದಾನೆ. 

ಪೊಲೀಸ್ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರು ಆತನನ್ನು ಕೆಳಗಿಳಿಸಲು ಮನವೊಲಿಸಲು ಸುಮಾರು ಏಳು ಗಂಟೆಗಳ ಕಾಲ ತೆಗೆದುಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ