ನೈಪಿಡಾವ್ : ಮ್ಯಾನ್ಮಾರ್ನ ಶಾಲೆಯೊಂದರ ಮೇಲೆ ಸೇನಾ ಹೆಲಿಕಾಪ್ಟರ್ಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಏಳು ಮಕ್ಕಳು ಸೇರಿದಂತೆ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ.
ಶುಕ್ರವಾರ ಸೆಂಟ್ರಲ್ ಸಾಗಯಿಂಗ್ ಪ್ರದೇಶದ ಲೆಟ್ ಯೆಟ್ ಕೋನ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಬೌದ್ಧ ವಿಹಾರದಲ್ಲಿದ್ದ ಶಾಲೆಯ ಮೇಲೆ ಸೇನಾ ಹೆಲಿಕಾಪ್ಟರ್ಗಳು ಗುಂಡಿನ ದಾಳಿ ನಡೆಸಿವೆ.
ಈ ವೇಳೆ ಘಟನೆಯಲ್ಲಿ ಕೆಲವು ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಇತರರು ಸೇನಾ ಪಡೆಗಳು ಗ್ರಾಮಕ್ಕೆ ಪ್ರವೇಶಿಸಿದ ನಂತರ ಸಾವನ್ನಪ್ಪಿದ್ದಾರೆ. ನಂತರ ಶವಗಳನ್ನು ಮಿಲಿಟರಿಯಿಂದ 11 ಕಿಲೋಮೀಟರ್ ದೂರದಲ್ಲಿರುವ ಟೌನ್ಶಿಪ್ಗೆ ಸಾಗಿಸಿ ಸಮಾಧಿ ಮಾಡಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ನಡೆದ ದಂಗೆಯ ನಂತರ ಭದ್ರತಾ ಪಡೆಗಳು ಇಲ್ಲಿಯವರೆಗೂ ಸುಮಾರು 1,600 ಜನರನ್ನು ಕೊಂದಿವೆ. 12,000ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿವೆ ಎಂದು ತಿಳಿಸಲಾಗಿದೆ.