ಭಾರತೀಯ ಮೀನುಗಾರರ ಮೇಲೆ ಮತ್ತೆ ಶ್ರೀಲಂಕಾ ಉದ್ಧಟತನ

ಭಾನುವಾರ, 26 ಮಾರ್ಚ್ 2017 (11:16 IST)
ಧನುಷ್ಕೋಟಿ:  ತಮಿಳುನಾಡಿನ ಮೀನುಗಾರರ ಮೇಲೆ ಮತ್ತೊಮ್ಮೆ ಶ್ರೀಲಂಕಾ ನೌಕಾ ಸೇನೆ ಅಟ್ಟಹಾಸ ಮೆರೆದಿದೆ. ಧನುಷ್ಕೋಟಿಯಲ್ಲಿ ಮೀನುಗಾರರ ಮೇಲೆ ದಾಳಿ ನಡೆಸಿದೆ.

 

ಧನುಷ್ಕೋಟಿಯಲ್ಲಿ ತಮಿಳುನಾಡಿನ ಮೀನುಗಾರರ ಮೇಲೆ ಬಾಟಲಿ, ಕಲ್ಲುಗಳಿಂದ ದಾಳಿ ನಡೆಸಿದ ಲಂಕಾ ನೌಕಾ ಪಡೆ, 12 ಮೀನುಗಾರರನ್ನು ಬಂಧಿಸಿದೆ.

 
ಹಿಂದೊಮ್ಮೆ ಇದೇ ರೀತಿ ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದ ಲಂಕಾ ಪಡೆ, ಓರ್ವನ ಸಾವಿಗೆ ಕಾರಣವಾಗಿತ್ತು.  ಈ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಲಂಕಾಕ್ಕೆ ತನ್ನ ಆಕ್ಷೇಪ ಸಲ್ಲಿಸಿತ್ತು. ಇದೀಗ ಮತ್ತೊಮ್ಮೆ ತನ್ನ ಕ್ರೌರ್ಯ ಮೆರೆದಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ