ಮ್ಯಾಡ್ರೀಡ್ : ವಿದ್ಯುತ್ ಉಳಿತಾಯಕ್ಕೆ ಟೈ ಕಟ್ಟುವುದನ್ನು ನಿಲ್ಲಿಸಿ ಎಂದು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಮನವಿ ಮಾಡಿದ್ದಾರೆ.
ನಾನು ಈಗಾಗಲೇ ಟೈ ಕಟ್ಟುವುದನ್ನು ನಿಲ್ಲಿಸಿದ್ದೇನೆ. ನಮ್ಮ ಮಂತ್ರಿಗಳು ಮತ್ತು ಕಚೇರಿಯಲ್ಲಿರುವ ಸಿಬ್ಬಂದಿ ಈ ನಡೆಯನ್ನು ಅನುಸರಿಸಬೇಕು. ಈ ಮೂಲಕ ವಿದ್ಯುತ್ ಶಕ್ತಿಯನ್ನು ಉಳಿತಾಯ ಮಾಡಬಹುದು ಎಂದು ಅವರು ಹೇಳಿದ್ದಾರೆ.
ನೀಲಿ ಬಣ್ಣದ ಸೂಟ್ ಮತ್ತು ಬಿಳಿ ಬಣ್ಣದ ಶರ್ಟ್ ಧರಿಸಿ ಮಾತಾನಾಡಿದ ಅವರು, ಈ ನಿರ್ಧಾರದ ಮೂಲಕ ಎಲ್ಲರೂ ವಿದ್ಯುತ್ ಉಳಿತಾಯಕ್ಕೆ ಸಹಕಾರ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಆಗಸ್ಟ್ 1 ರಿಂದ ಸ್ಪೇನ್ ಸರ್ಕಾರವು ಇಂಧನ ದಕ್ಷತೆ ಮತ್ತು ಉಳಿತಾಯ ಕಾರ್ಯಕ್ರಮವನ್ನು ಆರಂಭಿಸಲಿದೆ. ಇತರ ಯುರೋಪ್ ರಾಷ್ಟ್ರಗಳು ಇಂಧನ ಉಳಿತಾಯಕ್ಕೆ ಯೋಜನೆ ಹಾಕಿಕೊಂಡಿವೆ.