ಅಪ್ಪ ಅಮ್ಮನ 20 ವರ್ಷಗಳ ಮುನಿಸಿಗೆ ಮಂಗಳ ಹಾಡಿದ ಮಗ

ಬುಧವಾರ, 4 ಜನವರಿ 2017 (15:37 IST)
ಪತಿ- ಪತ್ನಿ ಜಗಳ ಉಂಡು ಮಲಗುವತನಕವೆನ್ನುತ್ತಾರೆ. ಆದರೆ ಜಪಾನಿನಲ್ಲೊಂದು ದಂಪತಿ ಬರೊಬ್ಬರಿ 20 ವರ್ಷಗಳ ಕಾಲ ಮುನಿಸಿಕೊಂಡಿದ್ದ ಘಟನೆ ಬೆಳಕಿಗೆ ಬಂದಿದೆ. ಇಬ್ಬರ ಸುಪುತ್ರ ಈಗ ತಂದೆತಾಯಿಗಳನ್ನು ಒಗ್ಗೂಡಿಸಿದ್ದು ಪುನರ್ಮಿಲನದ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. 

ಜಪಾನಿನ ನಾರಾ ನಿವಾಸಿ ಒಟೋ ಕಟ್ಯಾಮಾ ತನ್ನ ಪತಿ ಯುಮಿ ಜತೆ ಕಳೆದ 20 ವರ್ಷಗಳಿಂದ ಮಾತನಾಡಿಲ್ಲ. ಅದು ಕೂಡ ಒಂದೇ ಸೂರಿನಡಿ ಇದ್ದರೂ. ಕಾರಣ ಏನಂತೀರಾ? ಅದು ಕೂಡ ವಿಚಿತ್ರವೇ. ಪತ್ನಿ ಮಕ್ಕಳ ಕಡೆ ಹೆಚ್ಚಿನ ಗಮನ ನೀಡುತ್ತಾಳೆ, ತನ್ನನ್ನು ಕ್ಯಾರೇ ಎನ್ನುತ್ತಿಲ್ಲ ಎಂಬ ಅಸೂಯೆಯಿಂದ ಆತ ಪತ್ನಿ ಜತೆ ಮಾತನಾಡುವುದನ್ನು ನಿಲ್ಲಿಸಿದ್ದಾನೆ. ಆದರೆ ಮಕ್ಕಳ ಜತೆ ಸಹಜವಾಗಿ ಬೆರೆಯುತ್ತಿದ್ದ. 
 
ತನ್ನ ತಂದೆ ತಾಯಿಗಳ ಈ ವಿರಸದಿಂದ ನೊಂದ ಅವರ ಪುತ್ರ ಯೋಶಿಕಿ ತನ್ನ ಪೋಷಕರನ್ನು ಒಂದಾಗಿಸಲು ಒಂದು ಕಾರ್ಯಕ್ರಮ ನಡೆಸಿ ಎಂದು ದೂರದರ್ಶನವೊಂದಕ್ಕೆ ಪತ್ರ ಬರೆದಿದ್ದ. ಆತನ ಮನವಿಗೆ ಸ್ಪಂದಿಸಿದ ಟಿವಿ ಚಾನೆಲ್ ಅವರು ಪ್ರಥಮ ಬಾರಿ ಡೇಟಿಂಗ್ ಮಾಡಿದ ಪಾರ್ಕ್‌ನಲ್ಲೇ ಅವರಿಬ್ಬರು ಮತ್ತೆ ಭೇಟಿಯಾಗುವಂತೆ ಮಾಡಿದೆ. 
 
ತಮ್ಮ ತಂದೆ-ತಾಯಿ ಪುನರ್ಮಿಲನವನ್ನು ದೂರದಿಂದಲೇ ನೋಡುತ್ತಿದ್ದ ಮೂವರು ಮಕ್ಕಳು ಆನಂದಭಾಷ್ಪ ಸುರಿಸಿದ್ದಾರೆ. 
 
ಪತ್ನಿ ಕೈ ಹಿಡಿದು ಮಾತನಾಡಿದ ಒಟೋ ನಾನು ತಪ್ಪು ಮಾಡಿದೆ. ಇಷ್ಟು ದಿನದಿಂದ ನನ್ನನ್ನು ಸಹಿಸಿಕೊಂಡಿದ್ದೀಯಾ. ನಿನ್ನಂತಹ ಪತ್ನಿಯನ್ನು ಪಡೆದಿರುವುದಕ್ಕೆ ನನಗೆ ಹೆಮ್ಮೆ ಎನ್ನಿಸುತ್ತಿದೆ. ಮಕ್ಕಳ ಮೇಲೆ ಹೆಚ್ಚಿನ ಪ್ರೀತಿ-ಕಾಳಜಿ ತೋರುತ್ತಿ, ನನ್ನನ್ನು ನಿರ್ಲಕ್ಷಿಸಿ ಎಂಬ ಅಸೂಯೆಯಲ್ಲಿ ಹೀಗೆ ಮಾಡಿದೆ. ನನ್ನನ್ನು ಕ್ಷಮಿಸು ಎಂದು ಕಣ್ಣೀರಿಟ್ಟಿದ್ದಾನೆ. ಪತಿ ಕೊನೆಗೂ ಮಾತನಾಡಿದನೆಂಬ ಸಂತೋಷದಲ್ಲಿ ಪತ್ನಿ ಲೋಕವನ್ನೇ ಮರೆತು ಬಿಟ್ಟಿದ್ದಾಳೆ.   
 
ಬಳಿಕ ಇನ್ನು ಮೇಲೆ ತಾವು ಪ್ರೀತಿಯಿಂದ ಇರುತ್ತೇವೆ ಎಂದು ಟಿವಿಶೋನಲ್ಲಿ ಹೇಳಿಕೊಂಡಿದ್ದಾನೆ.
 
ನಮ್ಮ ತಾಯಿ ತಂದೆ ಬಳಿ ಸಹಜವಾಗಿಯೇ ಮಾತನ್ನಾಡುತ್ತಿದ್ದಳು. ಆದರೆ ತಂದೆ ಮಾತ್ರ ಎಂದಿಗೂ ಆಕೆಯ ಮಾತಿಗೆ ಸ್ಪಂದಿಸುತ್ತಿರಲಿಲ್ಲ ಎನ್ನುತ್ತಾನೆ ಎರಡು ಅಕ್ಕಂದಿರ ಮುದ್ದಿನ ತಮ್ಮ 18 ವರ್ಷದ ಯೋಶಿಕಿ. 
 

ವೆಬ್ದುನಿಯಾವನ್ನು ಓದಿ