Sunita Williams: ನೌಕೆಯಿಂದ ಇಳಿದ ತಕ್ಷಣ ಯಾವ ಸ್ಥಿತಿಯಲ್ಲಿದ್ದರು, ಕರೆದೊಯ್ದಿದ್ದು ಹೇಗೆ ಇಲ್ಲಿದೆ ವಿಡಿಯೋ
ಸುನಿತಾ ವಿಲಿಯಮ್ಸ್ ಬಾಹ್ಯಾಕಾಶಕ್ಕೆ ಕೇವಲ 8 ದಿನಗಳ ಅಧ್ಯಯನಕ್ಕಾಗಿ ತೆರಳಿದ್ದರು. ಆದರೆ ಅವರ ನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಇಷ್ಟು ದಿನ ಸ್ಪೇಸ್ ಸ್ಟೇಷನ್ ನಲ್ಲೇ ಉಳಿಯುವಂತಾಯಿತು. ಕೊನೆಗೂ ಭಾರತೀಯ ಕಾಲಮಾನ ಪ್ರಕಾರ ಇಂದು ಬೆಳಗಿನ ಜಾವ ಅವರನ್ನು ಹೊತ್ತಿದ್ದ ನೌಕೆ ಫ್ಲೋರಿಡಾದ ಕಡಲಿಗೆ ಬಂದಿಳಿದಿದೆ.
ಕಡಲಿಗೆ ಬಂದು ಇಳಿದ ತಕ್ಷಣವೇ ಅವರನ್ನು ಹೊರಕರೆತರಲು ರಕ್ಷಣಾ ತಂಡ ಧಾವಿಸಿತು. ಮೊದಲು ಒಳಗಿದ್ದ ಗಗಯನಾತ್ರಿಗಳು ಸುರಕ್ಷಿತವಾಗಿದ್ದಾರೆಯೇ ಎಂದು ಪರಿಶೀಲಿಸಿದ ತಂಡ ಬಳಿಕ ಒಬ್ಬೊಬ್ಬರನ್ನಾಗಿ ಹೊರಕರೆತರಲು ವ್ಯವಸ್ಥೆ ಮಾಡಲಾಯಿತು.
ಎಲ್ಲರೂ ನಡೆಯಲೂ ಆಗದ ಸ್ಥಿತಿಯಲ್ಲಿದ್ದರು. ಹೀಗಾಗಿ ಎಲ್ಲಾ ಯಾತ್ರಿಗಳನ್ನೂ ಸ್ಟ್ರೆಚರ್ ನಲ್ಲಿ ಕೈ ಹಿಡಿದೆತ್ತಿ ಕೂರಿಸಿ ಕರೆದೊಯ್ಯಲಾಯಿತು. ಈ ವೇಳೆ ಎಲ್ಲಾ ಯಾತ್ರಿಗಳೂ ಸಂಭ್ರಮದಿಂದ ಕೈ ಬೀಸಿದರು. ಇದೀಗ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತದೆ.