ಯುಎಸ್‌ಗೆ ತಾಲಿಬಾನ್ ಎಚ್ಚರಿಕೆ

ಭಾನುವಾರ, 10 ಅಕ್ಟೋಬರ್ 2021 (14:17 IST)
ದೋಹಾ, ಅ 10 : ಅಫ್ಘಾನಿಸ್ತಾನದಿಂದ ಯುಎಸ್ ತನ್ನ ಸೇನೆಯನ್ನು ಹಿಂದಕ್ಕೆ ಪಡೆದ ಬಳಿಕ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡ ತಾಲಿಬಾನ್ನೊಂದಿಗೆ ನಡೆದ ಮೊದಲ ಮಾತುಕತೆಯಲ್ಲಿ ಆಡಳಿತವನ್ನು ಅಸ್ಥಿರಗೊಳಿಸದಂತೆ ತಾಲಿಬಾನ್ ಯುಎಸ್ಗೆ ಎಚ್ಚರಿಕೆ ನೀಡಿದೆ ಎಂದು ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಾಕಿ ಶನಿವಾರ ತಿಳಿಸಿದ್ದಾರೆ.

"ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದು ಯಾರಿಗೂ ಒಳಿತಲ್ಲ ಎಂದು ನಾವು ತಿಳಿಸಿದ್ದೇವೆ," ಎಂದು ಯುಎಸ್ನೊಂದಿಗೆ ದೋಹಾದ ಕತಾರ್ನಲ್ಲಿ ಮಾತುಕತೆ ನಡೆದ ಬಳಿಕ ಬಕಾರ್ ಸುದ್ದಿ ಸಂಸ್ಥೆಗೆ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಾಕಿ ಹೇಳಿದ್ದಾರೆ.
"ಅಫ್ಘಾನಿಸ್ತಾನದೊಂದಿಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳುವುದು ಎಲ್ಲರಿಗೂ ಒಳಿತು. ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಇರುವ ತಾಲಿಬಾನ್ ಸರ್ಕಾರವನ್ನು ಅಸ್ಥಿರಗೊಳಿಸಲು ಏನನ್ನೂ ಮಾಡಬಾರದು. ಆ ರೀತಿ ಮಾಡಿದ್ದಲ್ಲಿ ಜನರಿಗೆ ತೊಂದರೆ ಉಂಟಾಗುತ್ತದೆ," ಎಂದು ಅಮಿರ್ ಖಾನ್ ಮುತ್ತಾಕಿ ಎಚ್ಚರಿಕೆ ನೀಡಿದ್ದಾರೆ.
ವಿದೇಶಾಂಗ ಇಲಾಖೆಯ ಉಪ ವಿಶೇಷ ಪ್ರತಿನಿಧಿ ಟಾಮ್ ವೆಸ್ಟ್ ಮತ್ತು ಯುಎಸ್ಎಐಡಿಯ ಉನ್ನತ ಮಾನವೀಯ ಅಧಿಕಾರಿ ಸಾರಾ ಚಾರ್ಲ್ಸ್ ನೇತೃತ್ವದ ಯುಎಸ್ ತಂಡದೊಂದಿಗೆ ಎರಡು ದಿನಗಳ ಮಾತುಕತೆಯ ಮೊದಲ ದಿನದಂದು ಮುತ್ತಾಕಿ ಈ ಹೇಳಿಕೆಯನ್ನು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ