ಸುಡಾನ್: ಸುಡಾನ್ ನ ಪೂರ್ವ ಡಾರ್ಫುರ್ ಪ್ರಾಂತ್ಯದಲ್ಲಿ ಸಂಭವಿಸಿದ ಭಯಾನಕ ಭೂಕುಸಿತದಲ್ಲಿ 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಭಾರೀ ಮಳೆಯ ನಂತರ ಭಾನುವಾರ ಸಂಭವಿಸಿದ ಈ ದುರಂತದಲ್ಲಿ ಮರ್ರಾ ಪರ್ವತ ಪ್ರದೇಶದಲ್ಲಿರುವ ತಾರಾಸಿನ್ ಗುಡ್ಡಗಾಡು ಗ್ರಾಮ ನಾಶವಾಗಿದೆ ಎಂದು ಸುಡಾನ್ ವಿಮೋಚನಾ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಎಲ್ಲ ಗ್ರಾಮಸ್ಥರೂ ಮೃತಪಟ್ಟಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದ್ದು, 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಘಟನೆಯಲ್ಲಿ ಕೇವಲ ಓರ್ವ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ ಎಂದು ಬಂಡುಕೋರರ ಗುಂಪು ಹೇಳಿದೆ.
ಸಿಟ್ರಸ್ ಉತ್ಪಾದನೆಗೆ ಹೆಸರುವಾಸಿಯಾದ ಪ್ರದೇಶ ವಿನಾಶಕಾರಿ ಭೂ ಕುಸಿತದಿಂದ ನಾಶವಾಗಿದೆ ಸೇನೆ ಹೇಳಿದೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗಾಗಿ ವಿಶ್ವಸಂಸ್ಥೆ ಮತ್ತಿತರ ಸಂಸ್ಥೆಗಳಿಗೆ ಮನವಿ ಮಾಡಿದೆ.
ಈ ಭಾರಿ ಹಾಗೂ ಅನಾಹುತಕಾರಿ ಭೂಕುಸಿತವು ನಿಂಬೆಗೆ ಹೆಸರುವಾಸಿಯಾದ ಈ ಪ್ರಾಂತ್ಯದ ಇಡೀ ಭಾಗವನ್ನು ನಾಶಗೊಳಿಸಿದೆ ಎಂದೂ ಅದು ತಿಳಿಸಿದೆ.
ಅವಶೇಷಗಳಡಿ ಸಿಲುಕಿಕೊಂಡಿರುವ ಮೃತದೇಹಗಳನ್ನು ಹೊರ ತೆಗೆಯಲು ವಿಶ್ವ ಸಂಸ್ಥೆ ಹಾಗೂ ಇನ್ನಿತರ ನೆರವು ಸಂಘಟನೆಗಳ ಸಹಾಯಕ್ಕಾಗಿ ಬಂಡುಕೋರರ ಗುಂಪು ಮನವಿ ಮಾಡಿದೆ.
ಸುಡಾನ್ ಸೇನೆ ಮತ್ತು ಕ್ಷಿಪ್ರ ಅರೆಸೈನಿಕ ಪಡೆಗಳ ನಡುವಿನ ರಕ್ತಸಿಕ್ತ ಅಂತರ್ಯುದ್ಧದಲ್ಲಿ ಸಿಲುಕಿಕೊಂಡಿದ್ದು, ಇದು ದೇಶವನ್ನು ವಿಶ್ವದ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟಿನಲ್ಲಿ ಸಿಲುಕಿಸಿದೆ.