ಭಾರತದ ವಿರುದ್ಧ ವಿಧ್ವಂಸಕ ಕೃತ್ಯ ನಡೆಸುತ್ತಿದ್ದ ಉಗ್ರ ಅಝರ್ ಮಸೂದ್ ಗೆ ಯಾವ ಗತಿ ಬಂದಿದೆ ಗೊತ್ತಾ?!
ಜೆಇಎಂ ನಿಷೇಧಿತ ಉಗ್ರ ಸಂಘಟನೆಯಾಗಿದ್ದು, ಭಾರತದಲ್ಲಿ ಈತ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ. ಈತ ಈಗ ಕಳೆದ ಒಂದೂವರೆ ವರ್ಷದಿಂದ ಮಾರಣಾಂತಿಕ ರೋಗದಿಂದ ಬಳಲುತ್ತಿದ್ದು, ಹಾಸಿಗೆ ಹಿಡಿದಿದ್ದಾನೆ ಎಂದು ಭಾರತದ ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.
ತನ್ನ ಅನುಪಸ್ಥಿತಿಯಲ್ಲಿ ತನ್ನ ಸಹೋದರರಿಗೆ ಉಗ್ರ ಸಂಘಟನೆಯ ಜವಾಬ್ಧಾರಿ ವಹಿಸಿದ್ದಾನೆ ಎನ್ನಲಾಗಿದೆ. ಭಾರತದ ಸಂಸತ್ ಮೇಲಿನ ದಾಳಿ, ಅಯೋಧ್ಯೆ ದಾಳಿ, ಪಠಾಣ್ ಕೋಟ್ ದಾಳಿ ಮುಂತಾದ ವಿಧ್ವಂಸಕ ಕೃತ್ಯ ನಡೆಸಿ ಈತ ಕುಖ್ಯಾತಿಯಾಗಿದ್ದ.