ಪತ್ನಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪದ ಮೇಲೆ ಪೊಲೀಸರು ಉತ್ತರ ಪ್ಯಾರಿಸ್‌ನಲ್ಲಿ ವಾಸಿಸುತ್ತಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಆರೋಪಿ, ಪತ್ನಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪವನ್ನು ಒಪ್ಪಿಕೊಂಡು ನಾಲ್ಕು ವರ್ಷಗಳಲ್ಲಿ ಪತ್ನಿಯನ್ನು ಹಲವಾರು ಜನರ ಬಳಿ ಲೈಂಗಿಕ ಕ್ರಿಯೇಗಾಗಿ ಕಳುಹಿಸಿದ್ದೇನೆ. ಪ್ರತಿ ತಿಂಗಳು 5000 ಪೌಂಡ್ ಹಣವನ್ನು ಸಂಪಾದಿಸುತ್ತಿದ್ದೆ ಎಂದು ಆರೋಪಿ ಪತಿ ಹೇಳಿದ್ದಾನೆ.
ಹಣ ಸಂಪಾದಿಸುವ ಮಹದಾಸೆ ಹೊಂದಿದ್ದ ಪತಿ ಮಹಾಶಯನೊಬ್ಬ, ತನ್ನ ಪತ್ನಿಯನ್ನು ವೇಶ್ಯಾವಾಟಿಕೆಗೆ ಇಳಿಯುವಂತೆ ಒತ್ತಡ ಹೇರಿದ ಪ್ರಕರಣ ಬಯಲಿಗೆ ಬಂದಿದೆ. ಆರೋಪಿ ಪತಿ ನಾಲ್ಕು ವರ್ಷಗಳಲ್ಲಿ ತನ್ನ ಪತ್ನಿಯನ್ನು 2742 ಜನರ ಬಳಿ ಸೆಕ್ಸ್ ದಾಹ ತೀರಿಸಲು ಕಳುಹಿಸಿದ್ದಾನೆ.
ಆರೋಪಿ ವ್ಯಕ್ತಿ ತನ್ನ ಪತ್ನಿ ಮತ್ತು ಐದು ವರ್ಷದ ಮಗುವಿನೊಂದಿಗೆ ವಾಸಿಸುತ್ತಿದ್ದ. ಫ್ರಾನ್ಸ್ ದೇಶದಲ್ಲಿ ವೇಶ್ಯಾವಾಟಿಕೆಗೆ ಕಾನೂನಿನ ಮಾನ್ಯತೆಯಿದೆ. ಆದರೆ, ವೇಶ್ಯಾವಾಟಿಕೆಗೆ ಪ್ರಚೋದಿಸುವುದಾಗಲಿ ಅಥವಾ ಒತ್ತಡ ಹೇರುವುದಾಗಲಿ ಕಾನೂನುಬಾಹಿರವಾಗಿದೆ.
46 ವರ್ಷ ವಯಸ್ಸಿನ ಪತ್ನಿ ಮನೆಯೊಳಗಡೆ ಗ್ರಾಹಕನ ಸೆಕ್ಸ್ ದಾಹ ತೀರಿಸುತ್ತಿದ್ದರೆ, ಆರೋಪಿ ವ್ಯಕ್ತಿ ತನ್ನ ಐದು ವರ್ಷದ ಪುತ್ರಿಯೊಂದಿಗೆ ಮನೆಯ ಹೊರಗಡೆ ಕಾರಿನಲ್ಲಿ ಕುಳಿತಿರುತ್ತಿದ್ದ. ಇಂಟರ್‌ನೆಟ್‌ನಲ್ಲಿ ತನ್ನ ಪತ್ನಿಯ ಪ್ರೋಫೈಲ್ ಪೋಸ್ಟ್ ಮಾಡಿ ಗ್ರಾಹಕರನ್ನು ಆಕರ್ಷಿಸುತ್ತಿದ್ದ ಎನ್ನಲಾಗಿದೆ.