ಪತಿ ಇಲ್ಲದಾಗ ಪ್ರಿಯಕರನೊಂದಿಗೆ ರೋಮ್ಯಾನ್ಸ್: ದಾರುಣ ಅಂತ್ಯ

ಭಾನುವಾರ, 12 ನವೆಂಬರ್ 2023 (13:19 IST)
ಚತ್ತೀಸ್‌ಗಢ್‌ದ ಜಂಜಗೀರ್-ಚಂಪಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು ಆರೋಪಿ ಪತಿ ಪುರ್ನೇಶ್ ಧಿವಾರ್, ತನ್ನ ಪತ್ನಿ 27 ವರ್ಷ ವಯಸ್ಸಿನ ಖುಷಿ ಮತ್ತು ಆಕೆಯ ಪ್ರಿಯಕರ ಪವನ್ ಧಿವಾರ್ ಭೋಜ್‌ಪುರ್ ಗ್ರಾಮದಲ್ಲಿರುವ ಮನೆಯಲ್ಲಿ ರಾತ್ರಿ ತಂಗಿರುವ ವಿಷಯ ತಿಳಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.      
 
ಅನೈತಿಕ ಸಂಬಂಧ ಹೊಂದಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಪತಿಯೊಬ್ಬ ಹತ್ಯೆ ಮಾಡಿದ ಘಟನೆ ಚತ್ತೀಸ್‌ಗಢ್ ಚಂಪಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಬಿದಿರಿನ ಕಟ್ಟಿಗೆಯಿಂದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಮನಬಂದಂತೆ ಆರೋಪಿ ಥಳಿಸಿದ್ದರಿಂದ, ಪತ್ನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಆಕೆಯ ಪ್ರಿಯಕರನನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಪರಾರಿಯಾಗಿರುವ ಆರೋಪಿಯ ವಿರುದ್ಧ ಜೋಡಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ