ಅಮೆರಿಕದ ಟೆಕ್ಸಾಸ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಉದ್ಯಾನವನಕ್ಕೆ ಹೋಗಿದ್ದ ಮಗುವಿನ ಮೆದುಳನ್ನು ಕೀಟವೊಂದು ತಿಂದಿದೆ. ಮಗು ಸಾವನ್ನಪ್ಪಿದೆ.
ಪಾರ್ಕ್ ನ, ಸ್ಪ್ಲಾಶ್ ಪ್ಯಾಡ್ ನಲ್ಲಿ ಮಗು ಆಡ್ತಿದ್ದಾಗ, ಅಮೀಬಾ ಮಗುವಿನ ಮೆದುಳನ್ನು ತಿಂದಿದೆ. 6 ದಿನ ಆಸ್ಪತ್ರೆಯಲ್ಲಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಅಮೀಬಾ ಮೂಗು ಅಥವಾ ಬಾಯಿಯ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಅಮಿಬಾ ಸೋಂಕಿಗೆ ತುತ್ತಾದ ಶೇಕಡಾ 95ರಷ್ಟು ಮಂದಿ ಸಾವನ್ನಪ್ಪುತ್ತಾರೆ.
ಅಮೀಬಾ, ಮಣ್ಣು, ಬಿಸಿ ಕೆರೆ, ಜಲಪಾತ ಅಥವಾ ನದಿಯಲ್ಲಿ ಕಾಣಬಹುದು. ಮೆದುಳು ತಿನ್ನುವ ಅಮೀಬಾವನ್ನು ಈಜುಕೊಳಗಳಲ್ಲಿಯೂ ಕಾಣಬಹುದು. 2009 ರಿಂದ 2018 ರವರೆಗೆ, ಅಮೆರಿಕದಲ್ಲಿ 34 ಅಮೀಬಾ ಪ್ರಕರಣಗಳು ಕಂಡುಬಂದಿವೆ.
ಆರ್ಲಿಂಗ್ಟನ್ನಲ್ಲಿರುವ ಎಲ್ಲಾ ಸಾರ್ವಜನಿಕ ಸ್ಪ್ಲಾಶ್ ಪ್ಯಾಡ್ಗಳನ್ನು ಮುಚ್ಚಲಾಗಿದೆ. ಸಿಡಿಸಿ ಸ್ಪ್ಲಾಶ್ ಪ್ಯಾಡ್ ನೀರಿನಲ್ಲಿ ಅಮೀಬಾ ಇರುವುದನ್ನು ದೃಢಪಡಿಸಿದೆ. ನೀರು ಸ್ವಚ್ಛವಾಗಿರದೆ ಹೋದಲ್ಲಿ ಅಮೀಬಾ ಹುಟ್ಟಿಕೊಳ್ಳುತ್ತದೆ. ಕಲುಷಿತ ನೀರು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಜನರು ಸಾಮಾನ್ಯವಾಗಿ ಸೋಂಕಿಗೆ ಒಳಗಾಗುತ್ತಾರೆ. ಕೊಳಕು ನೀರಿನ ಸಂಪರ್ಕಕ್ಕೆ ಬಂದಾಗ ಮಾತ್ರ ಅಮೀಬಾ ಜನರ ಮೇಲೆ ಪರಿಣಾಮ ಬೀರುತ್ತದೆ. ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ.