ಹೊಸ ಆದೇಶವೊಂದನ್ನು ಹೊರಡಿಸಿದ ಚೀನಾದ ಇಸ್ಲಾಮಿಕ್ ಸಂಸ್ಥೆ

ಮಂಗಳವಾರ, 22 ಮೇ 2018 (20:34 IST)
ಚೀನಾ : ರಾಷ್ಟ್ರವಾದವನ್ನು ಬೆಂಬಲಿಸಿ ರಾಷ್ಟ್ರ ಭಕ್ತಿಯ ಚೈತನ್ಯವನ್ನು ಮುಂದೆಕೊಂಡೊಯ್ಯುವ ಉದ್ದೇಶದಿಂದ ಚೀನಾದ ಇಸ್ಲಾಮಿಕ್ ಸಂಸ್ಥೆ ಆದೇಶವೊಂದನ್ನು  ಹೊರಡಿಸಿದೆ ಎಂಬುದಾಗಿ ತಿಳಿದುಬಂದಿದೆ.


ಹೌದು. ಚೀನಾದ ಇಸ್ಲಾಮಿಕ್ ಸಂಸ್ಥೆ ಚೀನಾದಲ್ಲಿರುವ ಎಲ್ಲಾ ಮಸೀದಿಗಳೂ ರಾಷ್ಟ್ರಧ್ವಜವನ್ನು ಕಡ್ಡಾಯವಾಗಿ ಹಾರಿಸುವುದರ ಜೊತೆಗೆ ಸಮಾಜವಾದದ ಮೂಲ ಮೌಲ್ಯಗಳ ಅಧ್ಯಯನವನ್ನೂ ಮಾಡಬೇಕೆಂದು ಆದೇಶ ಹೊರಡಿಸಿದೆ. ಈ ಬಗ್ಗೆ ಅಲ್ಲಿನ ಸರ್ಕಾರಿ ಸ್ವಾಮ್ಯದ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ಪ್ರಕಟಿಸಿದೆ.

ಚೀನಾದ ಇಸ್ಲಾಮಿಕ್ ಸಂಸ್ಥೆಯ ಆದೇಶಕ್ಕೆ ಅಲ್ಲಿನ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ನಿರ್ಧಾರ ಧಾರ್ಮಿಕ ಅಭಿವೃದ್ಧಿಗೆ ಸಹಕಾರಿಯಾದದ್ದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ