ಆಕ್ಸ್ ಫರ್ಡ್ ಗೂ ಮುನ್ನ ಅಮೇರಿಕದ ಮಾಡರ್ನಾದಿಂದ ಕೊರೊನಾ ಲಸಿಕೆ ಲಭ್ಯ

ಶುಕ್ರವಾರ, 30 ಅಕ್ಟೋಬರ್ 2020 (13:26 IST)
ಅಮೇರಿಕ : ಆಕ್ಸ್ ಫರ್ಡ್ ಕೊರೊನಾ ಲಸಿಕೆಗೂ ಮುನ್ನ ಅಮೇರಿಕದ ಮಾಡರ್ನಾ ಲಸಿಕೆ ಲಭ್ಯವಾಗಲಿದೆ  ಎಂಬುದಾಗಿ ತಿಳಿದುಬಂದಿದೆ.

ಅಮೇರಿಕದ ಮಾಡರ್ನಾ ಇಂಕ್ ಸಂಸ್ಥೆಯಿಂದ ವ್ಯಾಕ್ಸಿನ್ ತಕಂಡುಹಿಡಿಯಲಾಗಿದ್ದು, ,ಪ್ರಯೋಗಗಳಲ್ಲಿ ಮಾಡರ್ನಾ ಲಸಿಕೆ ಆಶಾದಾಯಕ ಫಲಿತಾಂಶ  ನೀಡಿದೆ ಎನ್ನಲಾಗಿದೆ. ಪ್ರಯೋಗ ಫಲಿತಾಂಶ ವಿವರ ವಿಶ್ವಸಂಸ್ಥೆ ಜೊತೆಗೆ ಹಂಚಿಕೆ ಮಾಡಲಾಗಿದೆ. ಪ್ರಾಯೋಗಿಕ ಬಿಡುಗಡೆಗೆ ವಿಶ್ವ ಆರೋಗ್ಯ ಸಂಸ್ಥೆ ಜತೆ ಚರ್ಚೆ ನಡೆಸಲಾಗಿದೆ.

30 ಸಾವಿರ ಜನರ ಮೇಲಿನ ಪ್ರಯೋಗ ಬಹುತೇಕ ಯಶಸ್ವಿಯಾಗಿದ್ದು,  ಕ್ಲಿನಿಕಲ್ ಟ್ರಯಲ್ ವರದಿ ವಿಶ್ವ ಆರೋಗ್ಯ ಸಂಸ್ಥೆ ಸಲ್ಲಿಕೆ ಮಾಡಲಾಗಿದೆ.  ಲಸಿಕೆ ಉತ್ಪಾದನೆಗೆ ಅಮೇರಿಕದ ಜಾನ್ಸನ್ ಮತ್ತು ಜಾನ್ಸನ್ ಕಂಪೆನಿ ಜೊತೆ ಮಾತುಕತೆ ಕೂಡ ನಡೆಸಲಾಗಿದೆ. ಅಮೇರಿಕ ಸೇರಿ ವಿವಿಧ ದೇಶಗಳಿಗೆ ಲಸಿಕೆ ನೀಡುವ ಒಪ್ಪಂದ ಮಾಡಲಾಗಿದೆ. WHO ಗ್ರೀನ್ ಸಿಗ್ನಲ್ ಕೊಟ್ಟರೆ ಡಿಸೆಂಬರ್ ನಲ್ಲೇ ಲಸಿಕೆ ಲಭ್ಯವಾಗಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ