ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್?

ಗುರುವಾರ, 10 ಮಾರ್ಚ್ 2022 (11:11 IST)
ನ್ಯೂಯಾರ್ಕ್ : ಅಮೆರಿಕದ ಮಾಜಿ ಅಧ್ಯಕ್ಷ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.

ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನವು ತಾಂತ್ರಿಕ ವೈಫಲ್ಯದಿಂದ ಕಳೆದ ಶನಿವಾರ ನ್ಯೂ ಓರ್ಲಿಯನ್ಸ್ನಲ್ಲಿ ತುರ್ತು ಲ್ಯಾಂಡಿಗ್ ಮಾಡಿದೆ.

ಘಟನೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ ವಿಮಾನದಲ್ಲಿದ್ದ ವ್ಯಕ್ತಿಯೊಬ್ಬರು, ಅವರ ಸಲಹೆಗಾರರು ಮತ್ತು ರಹಸ್ಯ ಸೇವೆಯೊಂದಿಗೆ ಸುರಕ್ಷಿತವಾಗಿ ವಿಮಾನವು ತುರ್ತು ಲ್ಯಾಂಡಿಗ್ ಆಗಿದೆ ಎಂದು ತಿಳಿಸಿದ್ದಾರೆ. 

ನ್ಯೂ ಓರ್ಲಿಯನ್ಸ್ನಲ್ಲಿ ತಮ್ಮ ಫ್ಲೋರಿಡಾ ಎಸ್ಟೇಟ್ ಮಾರ್-ಎ-ಲಾಗೊಗೆ ಹಿಂತಿರುಗುತ್ತಿದ್ದಾಗ ಶನಿವಾರ ರಾತ್ರಿ 11 ಗಂಟೆಗಿಂತ ಸ್ವಲ್ಪ ಮುಂಚೆ ತಾಂತ್ರಿಕ ವೈಫಲ್ಯ ಸಂಭವಿಸಿದೆ.

ಘಟನೆಯ ಬಗ್ಗೆ ತಿಳಿದಿರುವ ವ್ಯಕ್ತಿಯ ಪ್ರಕಾರ, ನ್ಯೂ ಓರ್ಲಿಯನ್ಸ್ ಲೇಕ್ಫ್ರಂಟ್ ವಿಮಾನ ನಿಲ್ದಾಣವನ್ನು ತೊರೆದ ನಂತರ ಸುಮಾರು 120 ಕಿಲೋಮೀಟರ್ ದೂರದಲ್ಲಿ ಈ ತಾಂತ್ರಿಕ ದೋಷ ಕಂಡು ಬಂದಿದೆ ಎಂದು ತಿಳಿಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ