ಹೌದು. ದಕ್ಷಿಣ ಚೀನಾದಲ್ಲಿ ವ್ಯಕ್ತಿಯೊಬ್ಬ ಹೋಟೆಲ್ ನಲ್ಲಿ 62 ರೂ. ಮೊತ್ತದ ಊಟ ಮಾಡಿದ್ದು, ಹಣ ನೀಡುವಾಗ 10 ರೂ ಕಡಿಮೆಯಾಗಿತ್ತು. ಅದಕ್ಕಾಗಿ ಆತ ತನ್ನ 2 ವರ್ಷದ ಮಗಳನ್ನೇ ಅಡವಿಟ್ಟು, ಮರುದಿನ ಬಂದು ಹಣ ನೀಡಿ ಆಕೆಯನ್ನು ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ.
ಆ ವೇಳೆ ಬಿಟ್ಟು ಹೋಗುತ್ತಿರುವ ತನ್ನ ತಂದೆಯ ಬಳಿ ಮಗು ಅಳುತ್ತಾ ಹೋದಾಗ ಆತ ಮಗುವನ್ನು ಹೊಟೇಲ್ ನೊಳಗೆ ತಳ್ಳಿ ಹೋಗುತ್ತಾನೆ. ಇದಕ್ಕೆ ಸಂಬಂಧಪಟ್ಟ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ಪಾಪಿ ತಂದೆಯ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.