ನಿರ್ಬಂಧ ಸಡಿಲಿಸಿದ ಬ್ರಿಟನ್ ಸರ್ಕಾರ

ಶುಕ್ರವಾರ, 8 ಅಕ್ಟೋಬರ್ 2021 (08:33 IST)
ಬ್ರಿಟಿಷ್ ಸರ್ಕಾರ ತನ್ನ ಪಟ್ಟು ಸಡಿಲಿಸಿದ್ದು, ಇಂಗ್ಲೆಂಡ್ಗೆ ಬರಲು ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದ ಭಾರತದ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್ನಿಂದ ವಿನಾಯಿತಿ ನೀಡಲು ಬ್ರಿಟನ್ ಸರ್ಕಾರ ಕೊನೆಗೂ ಒಪ್ಪಿದೆ.

ಕೋವಿಡ್ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಸರ್ಕಾರ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಂದ ಪ್ರಯಾಣಿಕರು ಇಂಗ್ಲೆಂಡ್ಗೆ ಆಗಮಿಸುವುದು ಮತ್ತು ಇಂಗ್ಲೆಂಡ್ನಿಂದ ಅಲ್ಲಿಗೆ ತೆರಳುವುದನ್ನು ನಿರ್ಬಂಧಿಸಿತ್ತು. ಇದೀಗ ಇಂಗ್ಲೆಂಡ್ ಸರ್ಕಾರವು ಇಂಗ್ಲೆಂಡಿಗೆ ಬರುವ ಮತ್ತು ಅಲ್ಲಿಂದ ತೆರಳುವವರ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದೆ. ಎರಡು ಡೋಸ್ ಲಸಿಕೆ ಪಡೆದವರಿಗೆ ಅಂತರರಾಷ್ಟ್ರೀಯ ಪ್ರಯಾಣ ನಿಯಮಗಳಲ್ಲಿ ಸಡಿಲಿಕೆ ಮಾಡಿದೆ.
ಬ್ರಿಟಿಷ್ ಸರ್ಕಾರದ 'ತಾರತಮ್ಯ'ದ ಪ್ರಯಾಣದ ನಿಯಮಗಳಿಗೆ ಪ್ರತಿಕ್ರಿಯೆಯ ಭಾಗವಾಗಿ ಭಾರತವು ಇಂಗ್ಲೆಂಡ್ನಿಂದ ಆಗಮಿಸುವವರಿಗೆ 10 ದಿನದ ಕ್ವಾರಂಟೈನ್ ಕಡ್ಡಾಯಗೊಳಿಸಿದ ಸುಮಾರು ಒಂದು ವಾರದ ನಂತರ, ಲಂಡನ್ನಲ್ಲಿರುವ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಸರ್ಕಾರವು ಭಾರತದಲ್ಲಿ ಎರಡು ಡೋಸ್ ಲಸಿಕೆ ಪಡೆದ ಕೋವಿಶೀಲ್ಡ್ ಪ್ರಮಾಣಪತ್ರವನ್ನು ಪರಿಗಣಿಸಲು ಒಪ್ಪಿಕೊಂಡಿದೆ. ಬ್ರಿಟಿಷ್ ಸರ್ಕಾರದ ಪ್ರಯಾಣ ನಿಯಮಗಳಲ್ಲಿನ ಇತ್ತೀಚಿನ ಬದಲಾವಣೆಗಳು ಅ. 11, ಬೆಳಿಗ್ಗೆ 9:30 ರಿಂದ ಜಾರಿಗೆ ಬರಲಿದೆ.
ಕೋವಿಶೀಲ್ಡ್ ಅಥವಾ ಬ್ರಿಟಿಷ್ ಸರ್ಕಾರ ಅನುಮೋದಿಸಿದ ಮತ್ತೊಂದು ಲಸಿಕೆ ಪಡೆದ ಭಾರತೀಯ ಪ್ರಯಾಣಿಕರಿಗೆ ಅಕ್ಟೋಬರ್ 11 ರಿಂದ ಯಾವುದೇ ಕ್ವಾರಂಟೈನ್ ಇಲ್ಲ' ಎಂದು ಬ್ರಿಟಿಷ್ ಸರ್ಕಾರದ ಗ್ರಾಂಟ್ ಶಾಪ್ಸ್ ಕಳೆದ ಸೋಮವಾರ ಜಾರಿಗೆ ಬಂದ ಹೊಸ ಪ್ರಯಾಣ ನಿಯಮಗಳಲ್ಲಿ ಬದಲಾವಣೆಗಳನ್ನು ಘೋಷಿಸಿದ ನಂತರ ಇಂಗ್ಲೆಂಡ್ನ ಭಾರತದ ರಾಯಭಾರಿ ಅಲೆಕ್ಸ್ ಎಲ್ಲಿಸ್ ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ