ತೇಜಸ್ವಿ ಸೂರ್ಯ ಅಮವಾಸ್ಯೆ ಆದ್ರೆ ನೀವೇನು ಹುಣ್ಣಿಮೆ ಚಂದ್ರನಾ: ಸಿದ್ದರಾಮಯ್ಯ ತೇಜಸ್ವಿ ಫ್ಯಾನ್ಸ್ ಪ್ರಶ್ನೆ

Krishnaveni K

ಬುಧವಾರ, 22 ಅಕ್ಟೋಬರ್ 2025 (09:17 IST)
ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯರನ್ನು ಅಮವಾಸ್ಯೆ ಎಂದು ನಿಂದಿಸಿದ ಸಿಎಂ ಸಿದ್ದರಾಮಯ್ಯಗೆ ತೇಜಸ್ವಿ ಅಭಿಮಾನಿಗಳು ನೀವೇನು ಹುಣ್ಣಿಮೆ ಚಂದ್ರನಾ ಎಂದು ಪ್ರಶ್ನೆ ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ ಬಿಜೆಪಿ ಸಂಸದರ ಬಗ್ಗೆ ವಾಗ್ದಾಳಿ ನಡೆಸುವ ಭರದಲ್ಲಿ ಇದಾನಲ್ಲಾ ಅಮವಾಸ್ಯೆ ತೇಜಸ್ವಿ ಸೂರ್ಯ, ಕೇಂದ್ರದಿಂದ ಹಣ ತರಲ್ಲ ಎಂದು ಹೀಯಾಳಿಸಿದ್ದರು. ಇದಕ್ಕೆ ತೇಜಸ್ವಿ ಬೆಂಬಲಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಅವರನ್ನು ಅಮವಾಸ್ಯೆ ಎನ್ನುವ ನೀವು ಇನ್ನೇನು? ಹುಣ್ಣಿಮೆ ಚಂದ್ರನಾ? ಒಬ್ಬ ಮುಖ್ಯಮಂತ್ರಿಯಾಗಿ ನಿಮ್ಮ ಸ್ಥಾನಕ್ಕೆ ತಕ್ಕ ಗೌರವಯುತ ಪದ ಬಳಕೆ ಮಾಡಿ ಮಾತನಾಡಿ. ಒಬ್ಬ ಸಂಸದನನ್ನು ಈ ರೀತಿ ನಿಂದಿಸುವುದು ಸರಿಯೇ. ಬಂದ ಹಣವನ್ನೆಲ್ಲಾ ಗ್ಯಾರಂಟಿ ಎಂದು ವಿನಿಯೋಗಿಸಿದರೆ ಅವರು ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರು, ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವ ಗಾದೆ ಕೇಳಿಲ್ವಾ? ಒಳ್ಳೆಯ ಆಡಳಿತ ಕೊಟ್ಟರೆ ಜನ ನಿಮ್ಮ ಕೈ ಹಿಡಿಯುತ್ತಾರೆ. ಇಲ್ಲದೇ ಹೋದರೆ ಬಿಜೆಪಿಗೆ ಆದ ಗತಿಯೇ ನಿಮಗೂ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ