ಕನ್ಯೆಯಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಕೊಲೆ ಮಾಡಿದ ಪಾಪಿ ಪತಿ

ಶುಕ್ರವಾರ, 7 ಸೆಪ್ಟಂಬರ್ 2018 (15:07 IST)
ಲಂಡನ್ : ಲಂಡನ್ ನಲ್ಲಿ 32 ವರ್ಷದ ವಯಸ್ಸಿನ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ತನ್ನ ಪತ್ನಿಯನ್ನು ‘ಆಕೆ ಕನ್ಯೆಯಲ್ಲ ‘ ಎಂಬ ಅನುಮಾನದಿಂದ ಕೊಲೆ ಮಾಡಿರುವುದಾಗಿ ವರದಿಯಾಗಿದೆ.


25 ವರ್ಷ ವಯಸ್ಸಿನ ಎಲಿಡೋನಾ ಡೆಮಿರಾಜ್ ಪತಿಯ ಅನುಮಾನಕ್ಕೆಬಲಿಯಾದ ಪತ್ನಿ ಎಂಬುದಾಗಿ ತಿಳಿದುಬಂದಿದೆ. ಈಕೆ ಮದುವೆಯಾದ  ನಂತರ ಕೇವಲ ಮೂರು ತಿಂಗಳ ಹಿಂದೆ ಅಲ್ಬೇನಿಯಾದಿಂದ ಬ್ರಿಟನ್ ಗೆ ಪತಿಯೊಂದಿಗೆ ಬಂದಿದ್ದಳು. ಆದರೆ ಆಕೆ ಕನ್ಯೆಯಲ್ಲ, ಆಕೆಯ ಮೇಲೆ ಅತ್ಯಾಚಾರವಾಗಿದೆ ಎಂಬ ಅನುಮಾನದ ಮೇಲೆ ಆಕೆಯ ಪತಿಯೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ.


ತಲೆ, ಕುತ್ತಿಗೆ, ಎದೆ ಸೇರಿದಂತೆ ಆಕೆಯ ಮೃತದೇಹದ ಮೇಲೆ ಒಟ್ಟು 27 ಗಾಯಗಳಾಗಿರುವುದು ಕಂಡುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ತಾಯಿ ತಮ್ಮ ಅಳಿಯನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ