ದೇಶದ ಹಿತದೃಷ್ಟಿಯಿಂದ ಐಸಿಜೆ ತೀರ್ಪು ಒಪ್ಪಲು ಸಾಧ್ಯವಿಲ್ಲ: ಪಾಕಿಸ್ತಾನ

ಗುರುವಾರ, 18 ಮೇ 2017 (18:01 IST)
ಕುಲಭೂಷಣ್ ಜಾಧವ್ ಪ್ರಕರಣ ಐಸಿಜೆ ವ್ಯಾಪ್ತಿಗೆ ಬರುವದಿಲ್ಲವಾದ್ದರಿಂದ ಐಸಿಜೆ ತೀರ್ಪು ಒಪ್ಪಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದೆ.
 
ರಾಷ್ಟ್ರದ ಹಿತದೃಷ್ಠಿಯಿಂದ ಅಂತಾರಾಷ್ಟ್ರೀಯ ಕೋರ್ಟ್ ನೀಡಿದ ತೀರ್ಪು ಒಪ್ಪಲಾಗುವುದಿಲ್ಲ. ಜಾಧವ್ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳಿವೆ. ಐಸಿಜೆಗೆ ಸಾಕ್ಷ್ಯಾಧಾರಗಳನ್ನು ಒಪ್ಪಿಸುತ್ತೇವೆ ಎಂದು ತಿಳಿಸಿದೆ.
 
ಇಂತಹ ಪ್ರಕರಣಗಳಲ್ಲಿ ಐಸಿಜೆ ಮೂರು ಬಾರಿ ತೀರ್ಪು ನೀಡಿದೆ. ಆದರೆ ತೀರ್ಪು ಪಾಲಿಸಲು ಸಾಧ್ಯವಾಗಿಲ್ಲ ಎಂದು ಪಾಕಿಸ್ತಾನ ಕೋರ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
 
ಮುಂದಿನ ವಿಚಾರಣೆಯಲ್ಲಿ ಕುಲಭೂಷಣ್ ಜಾಧವ್ ವಿರುದ್ಧ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸುತ್ತೇವೆ. ಇದೊಂದು ದೇಶದ ಭದ್ರತೆಯ ಪ್ರಶ್ನೆಯಾಗಿದೆ ಎಂದು ಪಾಕಿಸ್ತಾನ ತನ್ನ ಎಂದಿನ ವರಸೆಯನ್ನು ಮುಂದುವರಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ