ಗಾಂಧಿ ಮರಿ ಮೊಮ್ಮಗ ಸಲ್ಲಿಸಿದ್ದ ಅರ್ಜಿ ವಜಾ

ಶುಕ್ರವಾರ, 9 ಸೆಪ್ಟಂಬರ್ 2022 (14:37 IST)
ಅಹಮದಾಬಾದ್ : ಸಬರಮತಿ ಆಶ್ರಮದ ಸುತ್ತ ನಡೆಯಲಿರುವ ಪುನರ್ ಅಭಿವೃದ್ಧಿ ಕಾರ್ಯಗಳಿಗೆ ತಡೆ ನೀಡುವಂತೆ ಕೋರಿ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾ ಮಾಡಿದೆ.

ಆಶ್ರಮಕ್ಕೆ ಯಾವುದೇ ಧಕ್ಕೆಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಕೋರ್ಟ್ ಅರ್ಜಿ ವಜಾ ಮಾಡಿದೆ.

ಸಬರಮತಿ ಆಶ್ರಮದ ಸುತ್ತ 55 ಎಕರೆ ಭೂಮಿಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಇದರಿಂದ ಆಶ್ರಮಕ್ಕೆ ಧಕ್ಕೆಯಾಗಲಿದೆ ಮತ್ತು ತನ್ನ ಮೂಲ ಸಂಸ್ಕೃತಿಯನ್ನು ಕಳೆದುಕೊಳ್ಳಲಿದೆ. ಹೀಗಾಗಿ ಕಾಮಗಾರಿಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು. 

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರನ್ನೊಳಗೊಂಡ ಪೀಠವು,

ಈ ಯೋಜನೆಯು ಮಹಾತ್ಮ ಗಾಂಧಿಯವರ ಆಲೋಚನೆಗಳು ಮತ್ತು ತತ್ವಶಾಸ್ತ್ರವನ್ನು ಉತ್ತೇಜಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಗಾಂಧಿ ಆಶ್ರಮವು ಎಲ್ಲಾ ವಯೋಮಾನದ ಮನುಕುಲಕ್ಕೆ ಕಲಿಕೆಯ ಸ್ಥಳವಾಗಿದೆ ಎಂದು ಪೀಠ ಹೇಳಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ