ಎಸಿಬಿ ರದ್ದು ಆದೇಶ ಕುರಿತು ಸುಪ್ರೀಂನಲ್ಲಿ ಅರ್ಜಿ
ಕನಕರಾಜು ಎಂಬವರು ಖಾಸಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆಗೆ ಲಿಸ್ಟ್ ಮಾಡಲು ಮುಖ್ಯ ನ್ಯಾಯಧೀಶ ರಮಣ ಸೂಚಿಸಿದ್ದಾರೆ.
ಇಬ್ಬರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಲಂಚ ಕೇಳಿದ್ದ ಆರೋಪ ಮಾಡಿ ಕನಕರಾಜು ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಯುತ್ತಿದ್ದಾಗ ಎಸಿಬಿಯನ್ನು ರದ್ದುಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಎಸಿಬಿ ರದ್ದು ಮಾಡಿರುವುದು ತಪ್ಪು.
ಕೇಸುಗಳ ತನಿಖೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಹೈಕೋರ್ಟ್ ತೀರ್ಪಿಗೆ ತಡೆ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.