ಹೆಣ್ಣುಮಕ್ಕಳಿಗಾಗಿ ಶಾಲೆ ತೆರೆಯುತ್ತಿದೆ ತಾಲಿಬಾನ್
ತಾಲಿಬಾನ್ ಸರ್ಕಾರ ಹುಡುಗಿಯರಿಗೆ ಮತ್ತು ಮಹಿಳೆಯರ ಶಿಕ್ಷಣಕ್ಕೆ ಸಂಪೂರ್ಣ ಪ್ರವೇಶವನ್ನು ನೀಡುತ್ತದೆಯೇ ಎಂಬ ಬಗ್ಗೆ ತಿಂಗಳುಗಳ ಅನಿಶ್ಚಿತತೆಯ ನಂತರ ಶಿಕ್ಷಣ ಸಚಿವಾಲಯದ ವಕ್ತಾರ ಅಜೀಜ್ ಅಹ್ಮದ್ ರಾಯಾನ್ ರಾಯಿಟಸ್ರ್ಗೆ ಎಲ್ಲದಕ್ಕೂ ತೆರೆ ಎಳೆದಿದ್ದಾರೆ.
ಹುಡುಗಿಯರಿಗೆ ಶಿಕ್ಷಣ ಕುರಿತು ಸುದ್ದಿಗೋಷ್ಠಿ ನಡೆಸಿದ ಅಹ್ಮದ್, ಅಫ್ಘಾನಿಸ್ತಾನದಲ್ಲಿ ಮುಂದಿನ ವಾರ ತೆರೆಯುವ ಶಾಲೆಗಳಲ್ಲಿ ಓದಲು ಹುಡುಗರು ಮತ್ತು ಹುಡುಗಿಯರಿಗೆ ಅವಕಾಶವನ್ನು ನೀಡಲಾಗುತ್ತೆ. ಆದರೆ ಹೆಣ್ಣುಮಕ್ಕಳಿಗೆ ಕೆಲವು ಷರತ್ತುಗಳಿವೆ ಎಂದು ಹೇಳಿದ್ದಾರೆ.