ಕಡಿಮೆ ಸಂಬಳಕ್ಕೆ ಬರುವ ವಿದೇಶಿ ಉದ್ಯೋಗಿಗಳಿಗೆ ಬಿಗ್ ಶಾಕ್ ನೀಡಿದ ಟ್ರಂಪ್ ಸರ್ಕಾರ
ಗುರುವಾರ, 8 ಅಕ್ಟೋಬರ್ 2020 (10:25 IST)
ವಾಷಿಂಗ್ಟನ್ : ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್-1ಬಿ ವೀಸಾದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುವುದರ ಮೂಲಕ ಐಟಿ ಉದ್ಯೋಗಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ.
ಹೆಚ್-1ಬಿ ವೀಸಾ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಿದ ಟ್ರಂಪ್ ಸರ್ಕಾರ ವೀಸಾ ಪಡೆಯುವ ಮಾನದಂಡದಲ್ಲಿ ವೇತನ ಮಿತಿ ಹೆಚ್ಚಳ ಮಾಡಿ, ವೀಸಾ ಅವಧಿಯನ್ನು ಕಡಿಮೆ ಮಾಡಿದೆ. ಥರ್ಡ್ ಪಾರ್ಟಿ ಪ್ಲೇಸ್ಮೆಂಟ್ ಗಳ ಸಂಬಂಧ ಹೆಚ್-1 ಬಿ ವೀಸಾ ಅವಧಿಯನ್ನು 3 ವರ್ಷದಿಂದ 1 ವರ್ಷಕ್ಕೆ ಇಳಿಕೆ ಮಾಡಿದೆ, ಆ ಮೂಲಕ ಕಡಿಮೆ ಸಂಬಳಕ್ಕೆ ಬರುವ ವಿದೇಶಿ ಉದ್ಯೋಗಿಗಳಿಗೆ ಕಡಿವಾಣ ಹಾಕಿದೆ ಎನ್ನಲಾಗಿದೆ.