ಮುಸ್ಲಿಂ ದಂಪತಿಯ ಈ ನಡವಳಿಕೆಯೇ ಸ್ವಿಸ್ ಪೌರತ್ವ ನಿರಾಕರಣೆಗೆ ಕಾರಣವಾಯಿತಂತೆ

ಶನಿವಾರ, 18 ಆಗಸ್ಟ್ 2018 (13:13 IST)
ಜಿನೀವಾ : ಲಿಂಗ ಸಮಾನತೆ ಬಗ್ಗೆ ಮುಸ್ಲಿಂ ದಂಪತಿಗೆ ಗೌರವ ಇಲ್ಲದ ಹಿನ್ನೆಲೆಯಲ್ಲಿ ಅವರು ಸ್ವಿಸ್ ಪೌರತ್ವ ಕೋರಿ ಸಲ್ಲಿಸಿದ  ಅರ್ಜಿಯನ್ನು ತಿರಸ್ಕರಿಸಿರುವುದಾಗಿ ತಿಳಿದುಬಂದಿದೆ.


ಮುಸ್ಲಿಂ ದಂಪತಿಯ ಪೈಕಿ ಪುರುಷ ಮಹಿಳೆಯರಿಗೆ ಹಾಗೂ ಮಹಿಳೆ ಪುರುಷರಿಗೆ ಹಸ್ತಲಾಘವ ನೀಡಲು ನಿರಾಕರಿಸಿದ್ದರು. ಆದಕಾರಣ ಅವರ ಅರ್ಜಿಯನ್ನು  ತಿರಸ್ಕರಿಸಲಾಗಿದೆ ಎಂದು ಮೇಯರ್ ಗ್ರೆಗೊರ್ ಜುನೋದ್ ಹೇಳಿದ್ದಾರೆ.


ಪೌರತ್ವದ ಮಾನದಂಡಗಳಿಗೆ ಅನುಗುಣವಾಗಿ ಈ ದಂಪತಿ ಪೌರತ್ವ ಪಡೆಯಲು ಅರ್ಹರೇ ಎಂದು ನಿರ್ಧರಿಸುವ ಸಲುವಾಗಿ ಹಲವು ತಿಂಗಳ ಹಿಂದೆ ಮಹಾನಗರ ಪಾಲಿಕೆ ಇವರನ್ನು ವಿಚಾರಣೆಗೆ ಗುರಿಪಡಿಸಿತ್ತು. ಆದರೆ ಶುಕ್ರವಾರ ಈ ಬಗ್ಗೆ ನಿರ್ಧಾರ ಪ್ರಕಟಿಸಿರುವ ಪಾಲಿಕೆ, ಏಕತೆಯ ಮಾನದಂಡದಲ್ಲಿ ಈ ದಂಪತಿ ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ಆದರೆ ದಂಪತಿ ಯಾವ ದೇಶದವರು ಎನ್ನುವ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ವಿರುದ್ಧ ಲಿಂಗಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಕಷ್ಟಪಟ್ಟಿದ್ದಲ್ಲದೆ, ವಿರುದ್ಧ ಲಿಂಗಿಗಳಿಗೆ ಹಸ್ತಲಾಘವ ನೀಡಲು ನಿರಾಕರಿಸಿದ್ದರು ಎನ್ನುವುದಾಗಿ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ