ವಿಜಯಪುರ: ಚಡಚಣದ ಎಸ್ ಬಿಐ ಬ್ಯಾಂಕ್ ನಲ್ಲಿ ಸಿನಿಮೀಯ ರೀತಿಯಲ್ಲಿ ನಡೆದ ದರೋಡೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಇದೀಗ ದರೋಡೆಕೋರರ ಬಗ್ಗೆ ಸುಳಿವೊಂದು ಸಿಕ್ಕಿದೆ.
ನಿನ್ನೆ ಸಿನಿಮೀಯ ರೀತಿಯಲ್ಲಿ ಸೈನಿಕರ ಯೂನಿಫಾರ್ಮ್ ಧರಿಸಿ ಕಾರಿನಲ್ಲಿ ಶಸ್ತ್ರಸಜ್ಜಿತರಾಗಿ ಬಂದಿದ್ದ ದುಷ್ಕರ್ಮಿಗಳು ಬ್ಯಾಂಕ್ ಸಿಬ್ಬಂದಿಗಳ ಕೈ ಕಾಲು ಕಟ್ಟಿ 50 ಕೆಜಿಯಷ್ಟು ಚಿನ್ನ, 8 ಕೋಟಿಯಷ್ಟು ನಗದು ದೋಚಿದ್ದರು. ಪೊಲೀಸರು ಸಿಸಿಟಿವಿ ದೃಶ್ಯವನ್ನಾಧರಿಸಿ ತನಿಖೆ ಆರಂಭಿಸಿದ್ದರು.
ಇದೀಗ ದರೋಡೆಕೋರರು ದರೋಡೆಗೆ ಬಳಸಿದ್ದ ಸೊಲ್ಲಾಪುರದಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಕಾರಿನಲ್ಲಿ ಅಲ್ಪಸ್ವಲ್ಪ ಚಿನ್ನ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಪೊಲೀಸರು ಈಗ ಕಾರನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಬೃಹತ್ ದರೋಡೆ ಪ್ರಕರಣಗಳಲ್ಲಿ ಇದೂ ಒಂದಾಗಿದೆ. ದರೋಡೆಕೋರರ ಕೈಯಲ್ಲಿ ಪಿಸ್ತೂಲ್, ಮಾರಕಾಸ್ತ್ರಗಳಿತ್ತು. ಅಲರಾಂ ಬಟನ್ ಒತ್ತಲೂ ಮ್ಯಾನೇಜರ್ ಗೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಬ್ಯಾಂಕ್ ಸಿಬ್ಬಂದಿಗಳು ಅಸಹಾಯಕರಾಗಿ ನಿಲ್ಲಬೇಕಾಗಿ ಬಂತು.