ಪ್ರಿಯತಮನ ವೀರ್ಯಾಣುವಿನಿಂದಲೇ ಈಕೆಯ ಜೀವಕ್ಕೆ ಬಂತು ಕುತ್ತು!

ಗುರುವಾರ, 14 ಮಾರ್ಚ್ 2019 (10:52 IST)
ಬೆಂಗಳೂರು: ವೀರ್ಯಾಣುವಿನ ಅಲರ್ಜಿಯಿಂದ ಪ್ರಾಣಕ್ಕೇ ಸಂಚಕಾರ ಬರುವ ವಿಚಾರ ಎಲ್ಲರೂ ನೋಡಿದ್ದೀರಾ? ಆದರೆ ಸ್ಪೈನ್ ದೇಶದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.


31 ವರ್ಷದ ಮಹಿಳೆಯೋರ್ವಳು ತನ್ನ 32 ವರ್ಷದ ಪ್ರಿಯತಮನೊಂದಿಗೆ ರತಿ ಕ್ರೀಡೆ ಆಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡಿದ್ದಾಳೆ. ಲೈಂಗಿಕ ಸಂಬಂಧದ ಬಳಿಕ ಈ ಮಹಿಳೆಗೆ ಅಲರ್ಜಿ, ವಾಕರಿಕೆ ಸಮಸ್ಯೆ ಬಂದಿದೆ.

ತಕ್ಷಣ ವೈದ್ಯರ ಬಳಿಗೆ ಹೋದ ಈಕೆಗೆ ಅವರು ಹೇಳಿದ್ದು ಕೇಳಿ ಶಾಕ್ ಆಗಿದೆ. ವೈದ್ಯರ ಪ್ರಕಾರ ಈಕೆಗೆ ಅಲರ್ಜಿ ಸಮಸ್ಯೆ ತಂದಿಟ್ಟಿದ್ದು, ಪ್ರಿಯತಮನ ವೀರ್ಯಾಣು!

ಹೆಚ್ಚಿನ ವಿಚಾರಣೆ ಬಳಿಕ ತಿಳಿದುಬಂದಿದ್ದೇನೆಂದರೆ ಈಕೆ ಲೈಂಗಿಕ ಕ್ರಿಯೆ ನಡೆಸಿದ ಪ್ರಿಯತಮನಿಗೆ ಕಿವಿ ಸಂಬಂಧಿಸಿದ ಸಮಸ್ಯೆಯಿತ್ತು. ಇದಕ್ಕಾಗಿ ಆತ ಔಷಧಿಯೊಂದನ್ನು ಸೇವಿಸುತ್ತಿದ್ದ. ಆ ಔಷಧಿ ವೀರ್ಯಾಣುವಿನ ಮೇಲೆ ಪ್ರಭಾವ ಬೀರಿತ್ತು. ಹೀಗಾಗಿ ಆತನ ವೀರ್ಯಾಣು ಈಕೆಯ ದೇಹ ಪ್ರವೇಶಿಸಿ ಜೀವಕ್ಕೇ ಕುತ್ತು ತರಬಲ್ಲ ಸೋಂಕು ತಗಲಿದೆ ಎಂದು ತಿಳಿದುಬಂದಿದೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ