ತುತ್ತು ಅನ್ನಕ್ಕೂ ಪರದಾಟ, ಗೋಧಿ, ಧಾನ್ಯಗಳ ಕೊರತೆ!
ಇದರಿಂದ ದೇಶ ಅರಾಜಕತೆಗೆ ತುತ್ತಾಗುವ ಸರ್ವ ಲಕ್ಷಣವೂ ಸನ್ನಿಹಿತವಾಗಿದೆ ಎಂದು ಪಾಕಿಸ್ತಾನ್ ಮಿಲಿಟರಿ ಮಾನಿಟರ್ ವರದಿಮಾಡಿದೆ.
ಪಾಕ್ ಸದ್ಯ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದು ಗೋಧಿಯ ಅಭಾವವು ಇದಕ್ಕೆ ಸೂಕ್ತ ಉದಾಹರಣೆಯಾಗಿದೆ. ಇಲ್ಲಿನ ಬಡ ನಾಗರಿಕರು ಒಂದೆಡೆ ಆಹಾರದ ಕೊರತೆಯಿಂದ ಬಳಲುತ್ತಿದ್ದರೆ ಇನ್ನೊಂದೆಡೆ ಆರ್ಥಿಕ ಅಭಾವ ಅವರನ್ನು ಕಂಗೆಡಿಸಿದೆ.
ಕಳೆದ ಕೆಲವು ತಿಂಗಳಿನಿಂದ ಪಾಕ್ನ ನಾಗರಿಕರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ಸುದ್ದಿಪತ್ರಿಕೆ ವರದಿ ಮಾಡಿದೆ.