ಮನೆಗಳ ಮೇಲೆ ವಿಮಾನ ಪತನ: ಕನಿಷ್ಠ 32 ಸಾವು

ಸೋಮವಾರ, 16 ಜನವರಿ 2017 (11:36 IST)
ಕಿರ್ಗಿಸ್ತಾನದಲ್ಲಿ ಸ್ಥಳೀಯ ಸಮಯ 07:30ಕ್ಕೆ (01:30 GMT) ವಿಮಾನ ಪತನಗೊಂಡು ಕನಿಷ್ಠ 32 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ಟರ್ಕಿ ದೇಶಕ್ಕೆ ಸೇರಿದ ಇದು ಬೋಯಿಂಗ್ 747 ಕಾರ್ಗೋ ವಿಮಾನವಾಗಿದ್ದರಿಂದ ಅದರಲ್ಲಿ ಹೆಚ್ಚು ಪ್ರಯಾಣಿಕರು ಇರಲಿಲ್ಲ. ಆದರೆ ವಿಮಾನ ಜನವಸತಿ ಪ್ರದೇಶದಲ್ಲಿ ಬಿದ್ದ ಪರಿಣಾಮ ಅನೇಕ ಮನೆಗಳು ಧ್ವಂಸಗೊಂಡು ಹಲವರು ದುರ್ಮರಣಕ್ಕೀಡಾಗಿದ್ದಾರೆ.
 
ವಿಮಾನದಲ್ಲಿ ಸಿಬ್ಬಂದಿ ಮಾತ್ರವಿದ್ದರೆ ಅಥವಾ ಪ್ರಯಾಣಿಕರು ಸಹ ಇದ್ದರೆ ಎಂಬುದಿನ್ನು ತಿಳಿದು ಬಂದಿಲ್ಲ.
 
ವಿಮಾನ ಪತನಗೊಂಡ ಸ್ಥಳದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 15 ಕಟ್ಟಡಗಳಿಗೆ ಹಾನಿಯಾಗಿದೆ. ಮೃತರಲ್ಲಿ  ಮಕ್ಕಳು ಸಹ ಇದ್ದಾರೆಂದು ಹೇಳಲಾಗುತ್ತಿದೆ.  
 
ವಿಮಾನ ಪತನಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. 
 
ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ